


ಕೊಪ್ಪಳ, 13 ಜನವರಿ(ಹಿ.ಸ):
ಆ್ಯಂಕರ್:ಜಗತ್ತಿನ ಎಲ್ಲಾ ಇತಿಹಾಸದ ಸಾಧಕರು ಬಂದಿದ್ದು ವಿಶೇಷ ಸಣ್ಣ ಶಾಲೆಗಳಿಂದಲೇ, ನಾವೆಲ್ಲರೂ ವಿದ್ಯಾವಂತರಾಗಬೇಕು ಅದೇ ನಮ್ಮನ್ನು ಜಗತ್ತಿನ ಶ್ರೇಷ್ಠರನ್ನಾಗಿಸುತ್ತದೆ ಎಂದು ಡೆನ್ಮಾರ್ಕ ಜಿಜಿಡಬ್ಲ್ಯು ಚೇರಮನ್ ಫ್ಲೆಕ್ಸಿಟ್ರಾನ್ ಇಂಡಿಯಾದ ಸಿಇಓ ಆರ್. ಎಸ್. ಹಿರೇಮಠ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕುಷ್ಟಗಿ ರಸ್ತೆಯ ಶ್ರದ್ಧಾ ಶಿಕ್ಷಣ ಸಂಸ್ಥೆಯ ಎನ್.ಕೆ.ಪಿ.ಎಂ. ಶಾಲಡಯ 18ನೇ ವಾರ್ಷಿಕೋತ್ಸವ ಮತ್ತು ಸಾಂಸ್ಕøತಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸನ್ಮಿತ್ರ ಪಟ್ಟಣಶೆಟ್ಟಿಯವರು ಇಂಜಿನಿಯರಿಂಗ್ ಸ್ನೇಹಿತ, ಆತನ ಶೈಕ್ಷಣಿಕ ಸೇವೆ ನೋಡಲು ದೂರದಿಂದ ಬಂದಿದ್ದೇನೆ. ಜಗತ್ತಿನಲ್ಲಿ ಹುಟ್ಟಿದ ಮೇಲೆ ಇರುವ ಸಮಯದಲ್ಲಿ ಸಾಧಿಸಬೇಕು, ಸಾಧನೆ ಎಂದರೆ ಅದಕ್ಕೆ ನಿರ್ಧಿಷ್ಠವಾದ ವಿಷಯವಿಲ್ಲ, ನಮ್ಮ ಜ್ಞಾನದ ಹರಿವು ಅಷ್ಟು ವಿಸ್ತಾರಗೊಳಿಸಿಕೊಂಡು ಮುಂದೆ ಸಾಗಬೇಕು ಎಂದು ಕರೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಸಿ. ವಿ. ಜಡಿಯವರ ಇತಿಹಾಸದ ಪುಟಗಳಲ್ಲಿ ಜನೇವರಿ 12 ಅತ್ಯಂತ ವಿಶೇಷ ದಿನ, ಕೇವಲ 35ರ ಹರೆಯದ ವಿಶ್ವದ ಕಣ್ಣಿನ ಮಾಣಿಕ್ಯ ವೀರ ಸನ್ಯಾಸಿನಿ ವಿವೇಕಾನಂದರ ಜನ್ಮದಿನದಂದು ಶಾಲಾ ವಾರ್ಷಿಕೋತ್ಸವ ಹಮ್ಮಿಕೊಂಡಿರುವದು ಉತ್ತಮ ಆಯ್ಕೆ ಎಂದರು. ಮಕ್ಕಳಿಗೆ ವಿವೇಕಾನಂದ ಸದಾ ಆದರ್ಶ. ಎನ್.ಕೆ.ಪಿ.ಎಂ. ಶಾಲೆಯನ್ನು ತಂದೆಯ ಆಶಯದಂತೆ ವಿದ್ಯಾ ಸೇವೆಗೆ ಕೆಲಸ ಮಾಡುತ್ತಿರುವದು ಅತ್ಯಂತ ಸಂತೋಷ. ಹೆಚ್ಚಿನ ಶುಲ್ಕ ಇದ್ದರೆ ಉತ್ತಮ ಶಾಲೆ ಅಲ್ಲ, ಅಕ್ಷರವನ್ನು ಎದೆಯಲ್ಲಿ ಬಿತ್ತುವ ಪ್ರೀತಿಯ ಕಾಯಕ ಮಾಡುವ ಶಾಲೆ ಶ್ರೇಷ್ಠ, ಡೊನೇಷನ್ ಹಾವಳಿ ಇಲ್ಲದ ಶಾಲೆ ಎನ್ನುವದು ಹೆಮ್ಮೆ ಎಂದರು.
ಹೊಸಪೇಟೆಯ ಮಹಿಳಾ ಬಾಲಿಕೆಯರ ಕಾಲೇಜಿನ ಉಪನ್ಯಾಸಕಿ ಪಾರ್ವತಿ ಕೆ. ಮಾತನಾಡಿ, ಸಾಕ್ರೇಟಿಸಿನ ಮಾತಿನಂತೆ ಸರಿತಪ್ಪುಗಳನ್ನು ಮತ್ತು ಬದುಕಿನ ಆಗುಹೋಗುಗಳನ್ನು ಪರೀಕ್ಷಿಸಿಕೊಳ್ಳಬೇಕು ಪರೀಕ್ಷೆಗೆ ಒಳಪಡದ ಬದುಕು ಬದುಕೇ ಅಲ್ಲ ಎನ್ನುವಂತೆ ಜೀವನ ಇರಬೇಕು. ನಮ್ಮ ಅಡೆತಡೆಗಳನ್ನು ದಾಟಿ ಮುಂದೆ ಸಾಗಿದರೆ ಮಾತ್ರ ಸಾಧನೆ ಸಾಧ್ಯ, ಸಾಧನೆಗೆ ಅಡ್ಡ ದಾರಿ ಇಲ್ಲ ಹೊರತು ಪರಿಶ್ರಮ ಮತ್ತು ಕಾರ್ಯದಿಂದ ಬರುತ್ತದೆ, ನಿರಂತರ ಪ್ರಯತ್ನ ಮಾಡಬೇಕು ಎಂದರು. ಯಶಸ್ಸು ಅಂದರೆ ಅಂಕಗಳಲ್ಲ, ಒಂದು ಸೋಲಿನಿಂದ ಯಶಸ್ಸನ್ನು ಅಲ್ಲಗಳೆಯಲು ಸಹ ಬಾರದು, ವಿದ್ಯಾರ್ಥಿ ಅಧ್ಯಯನಶೀಲನಾಗಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಿ. ಕೆ. ಪಟ್ಟಣಶೆಟ್ಟಿ ಅವರು, ಶಾಲೆ ಅನ್ನುವದು ನಮ್ಮ ಬದುಕಾಗಿದೆ ಆದರೆ ಬದುಕಲಿಕ್ಕಲ್ಲ, ಅದು ಸೇವೆಯ ಸ್ವರೂಪದ್ದು, ಶಾಲೆಯಲ್ಲಿ ಡೊನೇಷನ್ ಇಲ್ಲದೇ ಉತ್ತಮ ಶಿಕ್ಷಣವನ್ನು ಕಡಿಮೆ ಶುಲ್ಕದಲ್ಲಿ ಮಕ್ಕಳ ಭವಿಷ್ಯ ರೂಪಿಸುತ್ತಿದ್ದೇವೆ ಎಂದರು.
ಪ್ರಾರ್ಥನೆ ಫರಿನಾ ಸುಲ್ತಾನಾ, ನಿರೂಪಣೆ ರಂಗಮ್ಮ ಕೆ. ಮಾಡಿದರೆ, ವಾರ್ಷಿಕ ವರದಿಯನ್ನು ಸವಿತಾ ಗೌಡರ ಮಾಡಿದರು, ಪ್ರಾಸ್ತಾವಿಕ ಮಧುಮತಿ ಪಟ್ಟಣಶೆಟ್ಟಿ, ಅರ್ಪಣ ಪಟ್ಟಣಶೆಟ್ಟಿ, ಅತಿಥಿ ಪರಿಚಯ ಲೇಖನ ಪಟ್ಟಣಶೆಟ್ಟಿ ಮಾಡಿದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
