
ಕಾನಾಹೊಸಳ್ಳಿ, 9 ಜನವರಿ(ಹಿ.ಸ):
ಆ್ಯಂಕರ್ : ಗದಗದಿಂದ ಶಬರಿಮಲೈಗೆ ಕಾರಿನಲ್ಲಿ ಹೊರಟಿದ್ದ ಕಾರು ರಸ್ತೆ ವಿಭಜಕಕ್ಕೆ ಮಂಗಳವಾರ ಡಿಕ್ಕಿ ಹೊಡೆದ ಕಾರಣ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದು, ಗಾಯಗೊಂಡವರನ್ನು ದಾವಣಗೆರೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಸಲಾಗಿದೆ.
ಗದಗ ನಿವಾಸಿಗಳಾದ ಯುವರಾಜ್ ಕಾಶಪ್ಪ ಹೂಗಾರ್ (22) ಮತ್ತು ಲಕ್ಕುಂಡಿಯ ಚನ್ನವೀರಗೌಡ ಹೊಳಿಯಪ್ಪ ಪಾಟೀಲ (32) ಮೃತರು. ವೀರಣ್ಣ ಸಂಗಳದ್ ಮಂಜುನಾಥ ತಳವಾರ ಮತ್ತು ಕಾರಿನ ಚಾಲಕ ಚಿದಂಬರ ಕುಲಕರ್ಣಿ ಅವರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಾರಿನ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದ್ದು, ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಜೋಗಿಹಳ್ಳಿ ತಾಂಡಾ ಕ್ರಾಸ್ ಬಳಿ ಈ ಘಟನೆ ನಡೆದಿದೆ.
ಕಾನಾಹೊಸಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
