
ದೆಹಲಿ, 9 ಜನವರಿ(ಹಿ.ಸ):
ಆ್ಯಂಕರ್ :
ನವದೆಹಲಿಯಲ್ಲಿ ಇಂದು ನಡೆಯುವ ಕಲಾ ಉತ್ಸವ ೨೦೨೪ ರ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಭಾಗವಹಿಸಲಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಸಹಯೋಗದಲ್ಲಿ ಇಂದಿನಿಂದ ಇದೇ ೧೨ ರವರೆಗೆ ನವ ದೆಹಲಿಯ ರಾಷ್ಟ್ರೀಯ ಬಾಲಭವನ ಮತ್ತು ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿಯಲ್ಲಿ ಕಲಾ ಉತ್ಸವವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು ಉಪಸ್ಥಿತರಿರುವರು.
ಉತ್ಸವದಲ್ಲಿ ಹಲವಾರು ಕಲಾ ಪ್ರದರ್ಶನಗಳು ನಡೆಯಲಿವೆ. ಇವುಗಳಲ್ಲಿ ಗಾಯನ ಸಂಗೀತ – ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಜಾನಪದ, ವಾದ್ಯಸಂಗೀತ – ತಾಳವಾದ್ಯ ಮತ್ತು ಸುಮಧುರ, ನೃತ್ಯ – ಶಾಸ್ತ್ರೀಯ ಮತ್ತು ಜಾನಪದ, ನೃತ್ಯ, ದೃಶ್ಯ ಕಲೆಗಳು ಮತ್ತು ಸ್ಥಳೀಯ ಆಟಿಕೆಗಳ ಪ್ರದರ್ಶನ ಸೇರಿವೆ.
೩೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಗಳ ಸುಮಾರು ೭೦೦ ವಿದ್ಯಾರ್ಥಿಗಳು ಈ ಎಲ್ಲಾ ಪ್ರಕಾರಗಳಲ್ಲಿ ತಮ್ಮ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತಾರೆ. ಪ್ರದರ್ಶನದ ವಿಜೇತರಿಗೆ ಜನವರಿ ೧೨ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು.
ಹಿಂದೂಸ್ತಾನ್ ಸಮಾಚಾರ್
