
ಜೋಹಾನ್ಸ್ ಬರ್ಗ್, 7 ಜನವರಿ(ಹಿ.ಸ):
ಆ್ಯಂಕರ್ :
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನ ಒಲ್ಡ್ ಎಡ್ವರ್ಡಿನ್ಸ್ ಕ್ರಿಕೆಟ್ ಗ್ರೌಂಡ್ ನಲ್ಲಿ ಕಳೆದ ರಾತ್ರಿ ನಡೆದ ೧೯ ವರ್ಷದೊಳಗಿನವರ ತ್ರಿಕೋನ ಸರಣಿಯ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ೬ ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ. ೨೫೭ ರನ್ ಗುರಿ ಬೆನ್ನಟ್ಟಿದ ಭಾರತ ತಂಡ, ನಾಯಕ ಉದಯ್ ಶರಣ್ ೧೧೨ ಮತ್ತು ಪ್ರಿಯಾಂಶು ಮೊಲಿಯಾ ಅವರ ೭೬ ರನ್ ಗಳ ಬಲದಿಂದ ೪೮.೪ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೨೬೦ ರನ್ ಗಳಿಸಿತು. ಭಾರತ ತಂಡ ಇದೇ ೧೦ರಂದು ನಡೆಯಲಿರುವ ಫೈನಲ್ ಗೆ ಈಗಾಗಲೇ ಅರ್ಹತೆ ಗಳಿಸಿದೆ.
ಹಿಂದೂಸ್ತಾನ್ ಸಮಾಚಾರ್
