ಬೆಂಗಳೂರು, 6 ಜನವರಿ(ಹಿ.ಸ):
ಆ್ಯಂಕರ್ :
ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಅವರ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ ಕರುನಾಡ ಚಕ್ರವರ್ತಿ ಬಿರುದಿನ ನಟ ಶಿವರಾಜ್ಕುಮಾರ್. ಕಾರಣ, ನಟ ಯಶ್ ಈ ಬಾರಿ ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅಂದರೆ, ಅವರಿಗೆ ಫ್ಯಾನ್ಸ್ ಜತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ, ಅವರೀಗ ಮುಂಬರುವ ‘ಟಾಕ್ಸಿಕ್’ ಚಿತ್ರದ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಗೆ ಮೀಸಲಿಟ್ಟ ಸಮಯದಲ್ಲಿ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಸಹಜವಾಗಿ ಸಾಧ್ಯವಾಗುವುದಿಲ್ಲ.
ಇದಕ್ಕೆ ಪರಿಹಾರ ಎಂಬಂತೆ ಇದೀಗ ಶಿವಣ್ಣ ನೇತೃತ್ವದಲ್ಲಿ ಕಾಮನ್ ಡಿಪಿ ಬಿಡುಗಡೆ ಆಗಿದ್ದು, ಅಂದು ಯಶ್ ಅಭಿಮಾನಿಗಳು ತಮ್ಮ ಡಿಪಿಯನ್ನು ‘ಯಶ್ ಸಿಡಿಪಿ’ಗೆ ಬದಲಾಯಿಸಿಕೊಂಡು ಆ ಮೂಲಕ ಯಶ್ ಹುಟ್ಟುಹಬ್ಬವನ್ನು ಅವರ ಹಾಜರಿ ಇಲ್ಲದೆಯೂ ರಾಕಿಂಗ್ ಸ್ಟಾರ್ ‘ಪ್ರೆಸೆನ್ಸ್’ನಲ್ಲಿ ಸೆಲೆಬ್ರೇಟ್ ಮಾಡಬಹುದು. ಸಿಡಿಪಿ ಮೂಲಕ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ತಮ್ಮದೇ ಡಿಪಿಯಲ್ಲಿಟ್ಟು ಆಚರಿಸಿ ಖುಷಿ ಪಡಬಹುದು. ‘ಮನಸ್ಸಿದ್ದಲ್ಲಿ ಮಾರ್ಗ’ ಎಂಬ ಮಾತಿನಂತೆಯೇ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಯಶ್ ಅವರ ಹುಟ್ಟುಹಬ್ಬವನ್ನು ಈ ಮೂಲಕ ಗ್ರಾಂಡ್ ಸೆಲೆಬ್ರೇಷನ್’ ಆಗಿಸಬಹುದು.
ಹಿಂದೂಸ್ತಾನ್ ಸಮಾಚಾರ್
