ಸಿರುಗುಪ್ಪ, 5 ಜನವರಿ(ಹಿ.ಸ):
ಆ್ಯಂಕರ್ : ಸಿರುಗುಪ್ಪ ತಾಲ್ಲೂಕಿನ ಗುಂಡಿಗನೂರು ಗ್ರಾಮದ ಲಕ್ಷ್ಮೀ(22) ಮತ್ತು ಬಿ.ಸವಿತಾ (ಎರಡುವರೆ ವರ್ಷ) ಮಗು ಡಿ.31 ರಂದು ಕಾಣೆಯಾಗಿರುವ ಕುರಿತು ಸಿರಿಗೇರಿ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣೆಯ ಎಎಸ್ಐ ಅವರು ತಿಳಿಸಿದ್ದಾರೆ.
ಲಕ್ಷ್ಮೀ ಚಹರೆ ಗುರುತು: ಎತ್ತರ 5 ಅಡಿ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಳದಿ ಮತ್ತು ಗುಲಾಬಿ ಬಣ್ಣದ ಸೀರೆ ಹಾಗು ಕೆಂಪು ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಮಗು ಬಿ.ಸವಿತಾ ಚಹರೆ ಗುರುತು: ಎತ್ತರ ಎರಡುವರೆ ಅಡಿ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಮತ್ತು ಸಿಮೆಂಟ್ ಬಣ್ಣದ ಚಿತ್ರವಿರುವ ಫ್ರಾಕ್ ಧರಿಸಿರುತ್ತಾಳೆ.
ಈ ಮೇಲ್ಕಂಡ ಚಹರೆಯುಳ್ಳ ಕಾಣೆಯಾದ ತಾಯಿ ಮತ್ತು ಮಗುವಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೆÇೀಲಿಸ್ ಠಾಣೆ ದೂ.08396-244426, ಮೊ.9480803056 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
