ದೆಹಲಿ, 4 ಜನವರಿ(ಹಿ.ಸ):
ಆ್ಯಂಕರ್ :
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಕಥುವಾದಲ್ಲಿ ಇಂದು ಸ್ಟಾರ್ಟ್ ಅಪ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉತ್ತರ ರಾಜ್ಯಗಳ ಇಪ್ಪತ್ತೈದು ನವೋದ್ಯಮಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಲಿವೆ. ನವೋದ್ಯಮದ ಪ್ರದರ್ಶನದಲ್ಲಿ ಆರು ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ. ಉತ್ತರ ಭಾರತದಲ್ಲಿ ಉದಯೋನ್ಮುಖ ಸ್ಟಾರ್ಟ್ ಅಪ್ ಪ್ರವೃತ್ತಿಗಳು ಈ ಪ್ರದರ್ಶನದ ಘೋಷವಾಕ್ಯವಾಗಿದೆ. ದೆಹಲಿಯಲ್ಲಿ ನಿನ್ನೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್, ಕಳೆದ ಒಂಬತ್ತು ವರ್ಷಗಳಲ್ಲಿ ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ೨೦೧೪ರಲ್ಲಿ ೩೫೦ ಇದ್ದ ಸ್ಟಾರ್ಟ್ ಅಪ್ ಗಳ ಸಂಖ್ಯೆ ಈಗ ಒಂದು ಲಕ್ಷಕ್ಕೆ ಏರಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
