ದೆಹಲಿ, 4 ಜನವರಿ(ಹಿ.ಸ):
ಆ್ಯಂಕರ್ :
ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ನಿರೀಕ್ಷೆಮೀರಿ ಹೆಚ್ಚಾದ ಬಳಿಕ ಬಹಳಷ್ಟು ರೇಟಿಂಗ್ಸ್ ಸಂಸ್ಥೆಗಳು ತಮ್ಮ ಅಂದಾಜನ್ನು ಬದಲಿಸಿಕೊಳ್ಳುತ್ತಿವೆ. ಈ ಸಾಲಿಗೆ ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ( ಸೇರಿದೆ. 2023-24ರ ಹಣಕಾಸು ವರ್ಷಕ್ಕೆ ಭಾರತದ ಆರ್ಥಿಕತೆ ಶೇ. 6.2ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಅಂದಾಜು ಮಾಡಿದ್ದ ಇಂಡಿಯಾ ರೇಟಿಂಗ್ಸ್, ಇದೀಗ ಆ ದರವನ್ನು ಶೇ. 6.7ಕ್ಕೆ ಹೆಚ್ಚಿಸಿದೆ. ಸರ್ಕಾರದಿಂದ ಆಗುತ್ತಿರುವ ಬಂಡವಾಳ ವೆಚ್ಚ, ಸಾಫ್ಟ್ವೇರ್ ರಫ್ತಿನಲ್ಲಿ ಹೆಚ್ಚಳ ಇತ್ಯಾದಿ ಅಂಶಗಳು ಭಾರತದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತವೆ ಎಂಬುದು ಸಂಸ್ಥೆಯ ಅನಿಸಿಕೆ.
ಭಾರತದ ಜಿಡಿಪಿ ಹೆಚ್ಚಳಕ್ಕೆ 5 ಕಾರಣ ಬಿಚ್ಚಿಟ್ಟ ಇಂಡಿಯಾ ರೇಟಿಂಗ್ಸ್
ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ ಭಾರತದ ಜಿಡಿಪಿ ವೃದ್ಧಿ ಬಗ್ಗೆ ತಮಗೆ ಹೆಚ್ಚು ನಿರೀಕ್ಷೆ ಬರಲು ಹಲವು ಅಂಶಗಳು ಕಣ್ಮುಂದಿವೆ ಎಂದು ಹೇಳಿದ್ದು, ಅದರಲ್ಲಿ ಈ ಐದು ಅಂಶಗಳನ್ನು ಉಲ್ಲೇಖಿಸಿದೆ:
ಭಾರತದ ಆರ್ಥಿಕತೆಯ ಕ್ಷಮತೆ ಒಂದು ಕಾರಣ. 2023-23ರ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ ಎಲ್ಲರ ಲೆಕ್ಕಾಚಾರ ಮೀರಿಸಿ ಶೇ. 7.6ರಷ್ಟು ಬೆಳೆದಿದೆ.
ಸರ್ಕಾರದಿಂದ ನಿರಂತರ ಆಗುತ್ತಿರುವ ಬಂಡವಾಳ ವೆಚ್ಚ.
ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಸಾಲದ ಪ್ರಮಾಣ ಕಡಿಮೆ ಆಗಿರುವುದು.
ಹೊಸ ಖಾಸಗಿ ಕಾರ್ಪೊರೇಟ್ ಬಂಡವಾಳ ವೆಚ್ಚದ ಚಕ್ರ ಶುರುವಾಗುವ ನಿರೀಕ್ಷೆ.
ವ್ಯವಹಾರ ಮತ್ತು ಸಾಫ್ಟ್ವೇರ್ ಸರ್ವಿಸ್ ರಫ್ತು ಹೆಚ್ಚಾಗಬಹುದು. ಹೊರದೇಶಗಳಿಂದ ಭಾರತೀಯರು ತಮ್ಮ ದೇಶಕ್ಕೆ ಹಣ ವರ್ಗಾವಣೆ ಮಾಡುವುದು ಹೆಚ್ಚಾಗಬಹುದು.
ಹಿಂದೂಸ್ತಾನ್ ಸಮಾಚಾರ್
