
ಬೆಂಗಳೂರು, 3 ಜನವರಿ(ಹಿ.ಸ):
ಆ್ಯಂಕರ್ :
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತಾಡುವಾಗ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಸಂದರ್ಭದಲ್ಲಿ ಕರ್ನಾಟಕದಲ್ಲೂ ಗೋದ್ರಾದಂಥ ಘಟನೆ ಮರುಕಳಿಸಿದರೆ ಸೋಜಿಗ ಪಡಬೇಕಿಲ್ಲ ಅಂತ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತೆ ಮಾಳವಿಕಾ ಅವಿನಾಶ್ ಅವರನ್ನು ಬೆಂಗಳೂರು ವರದಿಗಾರಾರು ಮಾತಾಡಿಸಿದಾಗ ಅನ್ಯಮನಸ್ಕತೆಯಿಂದ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಸರ್ಕಾರದ್ದು, ಹಾಗಾಗಿ ಹರಿಪ್ರಸಾದ್ ನೀಡಿರುವ ಹೇಳಿಕೆ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವ ವಿವರಣೆ ನೀಡಬೇಕು ಎಂದು ಮಾಳವಿಕಾ ಹೇಳಿದರು. ಒಂದು ಮಾತಂತೂ ಸತ್ಯ, ರಾಜ್ಯದ ಹಿಂದೂ ಕಾರ್ಯಕರ್ತರ ಮನಸ್ಸನಲ್ಲಿ ಭೀತಿ ಮೂಡಿಸುವ ಕೆಲಸ ಸರ್ಕಾರ ಮಾಡುತ್ತಿದೆ, ಇಲ್ಲದೆ ಹೋಗಿದ್ದರೆ 31 ವರ್ಷಗಳಷ್ಟು ಹಿಂದಿನ ಪ್ರಕರಣದಲ್ಲಿ ಕರಸೇವಕನನ್ನು ಬಂಧಿಸುವ ಕೆಲಸ ಅದು ಮಾಡುತ್ತಿರಲಿಲ್ಲ ಎಂದು ಮಾಳವಿಕಾ ಹೇಳಿದರು.
ಹಿಂದೂಸ್ತಾನ್ ಸಮಾಚಾರ್
