ದೆಹಲಿ, 1 ಜನವರಿ(ಹಿ.ಸ):
ಆ್ಯಂಕರ್ :
ನೂತನ ವರ್ಷ-೨೦೨೪ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಗಣ್ಯರು ಶುಭ ಕೋರಿದ್ದಾರೆ. ಹೊಸ ವರ್ಷ ಸಂತೋಷದ ಸಮೃದ್ಧಿ ತರಲಿ, ದೇಶದ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ಗಣ್ಯರು ಕರೆ ನೀಡಿದ್ದಾರೆ. ಕೇರಳದಲ್ಲಿ ಸಂತಸ, ಸಂಭ್ರಮದಿಂದ ಜನರು ಹೊಸವರ್ಷದ ಉತ್ಸವವನ್ನು ಆಚರಿಸಿದರು. ಸಮುದ್ರ ತೀರಗಳು ಮತ್ತು ಇತರೆಡೆ ಹೊಸವರ್ಷದ ಆಗಮನಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪಂಜಾಬ್ನಲ್ಲಿ ಕೂಡ ಸೂಕ್ತ ಸುರಕ್ಷತಾ ವ್ಯವಸ್ಥೆಯೊಂದಿಗೆ ಹೊಸವರ್ಷವನ್ನು ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಜನಸಾಗರ, ದೇವಸ್ಥಾನಗಳಿಗೆ ಹೆಚ್ಚಿನ ಪ್ರಮಾಣದ ಭೇಟಿ ನೀಡುವುದು ಕಂಡು ಬಂದಿದೆ. ರಾಜಧಾನಿಯಲ್ಲೂ ದೆಹಲಿ ಕೂಡ ಸಡಗರ, ಸಂಭ್ರಮದಿಂದ ಕಳೆದ ವರ್ಷ ೨೦೨೩ಕ್ಕೆ ವಿಧಾಯ ಹೇಳಿ ಹೊಸವರ್ಷವನ್ನು ಬರಮಾಡಿಕೊಂಡರು. ಜಂಡೆವಾಲ ದೇವಿ ದೇವಸ್ಥಾನದಲ್ಲಿ ಹೊಸ ವರ್ಷ ನಿಮಿತ್ತ ವಿಶೇಷ ಆರತಿ ಆಯೋಜಿಸಲಾಗಿತ್ತು. ಜನರ ಬಹುದೊಡ್ಡ ಗುಂಪು ಇದರಲ್ಲಿ ಭಾಗವಹಿಸಿತ್ತು. ಇದೇ ರೀತಿ ಮುಂಬೈನಲ್ಲಿ ಮುಂಬಾದೇವಿ ದೇವಸ್ಥಾನದಲ್ಲೂ ಕೂಡ ಪೂಜೆ ಪುನಸ್ಕಾರಗಳು ಕಂಡು ಬಂದವು. ಗೇಟ್ ವೇ ಆಫ್ ಇಂಡಿಯಾ, ಮರೈನ್ ಡ್ರೈ, ಗುರ್ಗಾಂವ್, ಚೌಪಾಟಿ, ಮುಂತಾದೆಡೆ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಕಂಡು ಬಂದಿತು. ಗೋವಾದಲ್ಲೂ ಕೂಡ ಅದ್ಭುತ ಪಟಾಕಿ ಪ್ರದರ್ಶನದ ಮೂಲಕ ಹೊಸವರ್ಷವನ್ನು ಬರಮಾಡಿಕೊಳ್ಳಲಾಯಿತು.
ಹಿಂದೂಸ್ತಾನ್ ಸಮಾಚಾರ್
