ದೆಹಲಿ, 1 ಜನವರಿ(ಹಿ.ಸ):
ಆ್ಯಂಕರ್ :ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮತ್ತು ನಾಡಿದ್ದು ಅಂದರೆ ಜನವರಿ ೨ ಮತ್ತು ೩ನೇ ತಾರೀಖಿನಂದು ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ಬೆಳಿಗ್ಗೆ ಸುಮಾರು ೧೦:೩೦ ಕ್ಕೆ ಪ್ರಧಾನಿ ಮೋದಿ ಅವರು ತಮಿಳುನಾಡಿನ ತಿರುಚಿರಾಪಳ್ಳಿಗೆ ತಲುಪಲಿದ್ದಾರೆ. ಅಲ್ಲಿ ಭಾರತಿದಾಸನ್ ವಿಶ್ವವಿದ್ಯಾಲಯದ ೩೮ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ತಿರುಚಿರಾಪಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿಯವರು ೧೯ ಸಾವಿರದ ೮೫೦ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿಮಾನಯಾನ, ರೈಲು, ರಸ್ತೆ, ತೈಲ ಮತ್ತು ಅನಿಲ, ಹಡಗು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು ವಿವಿಧ ರೈಲ್ವೆ ಯೋಜನೆಗಳನ್ನು ಕೂಡ ದೇಶಕ್ಕೆ ಸಮರ್ಪಿಸಲಿದ್ದಾರೆ. ಇವುಗಳಲ್ಲಿ ೪೧.೪ ಕಿಲೋಮೀಟರ್ ಸೇಲಂ-ಮ್ಯಾಗ್ನೆಸೈಟ್ ಜಂಕ್ಷನ್, ಓಮಲೂರ್-ಮೆಟ್ಟೂರು ಅಣೆಕಟ್ಟು ವಿಭಾಗದ ರೈಲ್ವೇ ಲೈನ್ ಡಬ್ಲಿಂಗ್ ಯೋಜನೆಗಳು ಒಳಗೊಂಡಿವೆ; ಮಧುರೈ – ಟುಟಿಕೋರಿನ್ನಿಂದ ೧೬೦ ಕಿಲೋಮೀಟರ್ ಉದ್ದದ ರೈಲು ಮಾರ್ಗದ ಭಾಗವನ್ನು ಡಬ್ಲಿಂಗ್ ಮಾಡುವ ಯೋಜನೆ; ಮತ್ತು ತಿರುಚ್ಚಿರಾಪಳ್ಳಿ ಮನಮದುರೈ-ವಿರುಧುನಗರ, ವಿರುಧುನಗರ – ತೆಂಕಶಿ ಜಂಕ್ಷನ್, ಸೆಂಗೊಟ್ಟೈ – ತೆಂಕಶಿ ಜಂಕ್ಷನ್ – ತಿರುನೆಲ್ವೇಲಿ ತಿರುಚೆಂದೂರ್ ರೈಲು ಮಾರ್ಗ ವಿದ್ಯುದೀಕರಣದ ಮೂರು ಯೋಜನೆಗಳು ಒಳಗೊಂಡಿವೆ. ಎನ್ಎಚ್-೮೧ ರ ತಿರುಚ್ಚಿ – ಕಲ್ಲಾಗಮ್ ವಿಭಾಗಕ್ಕೆ ೩೯ ಕಿಮೀ ಫೋರ್ ಲೇನ್ ರಸ್ತೆಯನ್ನು, ೬೦ ಕಿಲೋಮೀಟರ್ ಉದ್ದದ ಎನ್ಎಚ್-೮೧ ರ ೪/೨-ಲೇನಿಂಗ್ ಆಫ್ ಕಲ್ಲಾಗಮ್ – ಮೀನ್ಸುರುಟ್ಟಿ ವಿಭಾಗ, ಎನ್ಹೆಚ್-೭೮೫ ರ ಚೆಟ್ಟಿಕುಲಂನ ೨೯ ಕಿಮೀ ಚತುರ್ಪಥ ರಸ್ತೆ – ನಾಥಮ್ ವಿಭಾಗ, ಎನ್ಎಚ್-೫೩೬ ರ ಕಾರೈಕುಡಿಯ ಸುಸಜ್ಜಿತ ೮೦ ಕಿಲೋಮೀಟರ್ ಉದ್ದದ ಎರಡು ಲೇನ್ ನ – ರಾಮನಾಥಪುರಂ ವಿಭಾಗ; ಮತ್ತು ಎನ್ಎಚ್-೧೭೯ಂ ರ ಸೇಲಂ – ತಿರುಪತ್ತೂರ್ – ವಾಣಿಯಂಬಾಡಿ ರಸ್ತೆಯ ೪೪ ಕಿಲೋಮೀಟರ್ ಉದ್ದದ ಫೋರ್ ಲೇನಿಂಗ್ ಒಳಗೊಂಡಿರುವ ಐದು ಹೆದ್ದಾರಿ ಯೋಜನೆಗಳನ್ನು ಪ್ರಧಾನ ಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಕಾಮರಾಜರ್ ಬಂದರಿನ ಜನರಲ್ ಕಾರ್ಗೋ ಬರ್ತ್-II ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಕಲ್ಪಾಕ್ಕಂನ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (ಐಜಿಸಿಎಆರ್) ನಲ್ಲಿರುವ ಡೆಮಾನ್ಸ್ಟ್ರೇಷನ್ ಫಾಸ್ಟ್ ರಿಯಾಕ್ಟರ್ ಫ್ಯೂಯಲ್ ರಿಪ್ರೊಸೆಸಿಂಗ್ ಪ್ಲಾಂಟ್ (ಡಿಎಫ್ಆರ್ಪಿ) ನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ಲಕ್ಷದ್ವೀಪದ ಅಗಟ್ಟಿ ತಲುಪಲಿರುವ ಪ್ರಧಾನಿ ಅಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನವರಿ ೩, ೨೦೨೪ ರಂದು, ಮಧ್ಯಾಹ್ನ ೧೨ ಗಂಟೆಗೆ, ಪ್ರಧಾನಿ ಮೋದಿಯವರು ಲಕ್ಷದ್ವೀಪದ ಕವರಟ್ಟಿಗೆ ತಲುಪಲಿದ್ದಾರೆ. ಲಕ್ಷದ್ವೀಪದಲ್ಲಿ ದೂರಸಂಪರ್ಕ, ಕುಡಿಯುವ ನೀರು, ಸೌರಶಕ್ತಿ ಮತ್ತು ಆರೋಗ್ಯದಂತಹ ಕ್ಷೇತ್ರಗಳಿಗೆ ಸಂಬಂಧಿಸಿದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು ಕಡಮತ್ನಲ್ಲಿ ಕಡಿಮೆ ತಾಪಮಾನದ ಥರ್ಮಲ್ ಡಿಸಲೈನೇಷನ್ (ಎಲ್ಟಿಟಿಡಿ) ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಲಕ್ಷದ್ವೀಪದ ಮೊದಲ ಬ್ಯಾಟರಿ ಬೆಂಬಲಿತ ಸೌರ ವಿದ್ಯುತ್ ಯೋಜನೆಯಾದ ಕವರಟ್ಟಿ ಸೌರ ವಿದ್ಯುತ್ ಸ್ಥಾವರ ರಾಷ್ಟ್ರಕ್ಕೆ ಸಮರ್ಪಿತವಾಗಿರುವ ಇತರ ಯೋಜನೆಗಳಲ್ಲಿ ಒಂದಾಗಿದೆ. ಪ್ರಧಾನಮಂತ್ರಿಯವರು ಕಲ್ಪೇನಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನವೀಕರಣ ಮತ್ತು ಆಂದ್ರೋತ್, ಚೆಟ್ಲಾಟ್, ಕದ್ಮತ್, ಅಗತ್ತಿ ಮತ್ತು ಮಿನಿಕಾಯ್ ಎಂಬ ಐದು ದ್ವೀಪಗಳಲ್ಲಿ ಐದು ಮಾದರಿ ಅಂಗನವಾಡಿ ಕೇಂದ್ರಗಳ (ನಂದ್ ಘರ್) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
