ಹೊಸಪೇಟೆ, 28 ಡಿಸೆಂಬರ್(ಹಿ.ಸ):
ಆ್ಯಂಕರ್: 2024ರ ಫೆಬ್ರವರಿಯಲ್ಲಿ ನಡೆಯುವ ಹಂಪಿ ಉತ್ಸವದ ಲಾಂಛನ ರಚನೆಗಾಗಿ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ.
ಹಂಪಿ ಉತ್ಸವವು ಫೆಬ್ರವರಿ 2,3 ಮತ್ತು 4 ರಂದು ನಡೆಯುತ್ತದೆ. ಈ ಉತ್ಸವದ ಲೋಗೋ ರಚಿಸಿ, ಜನವರಿ 2ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಆಯ್ಕೆಯಾದ ಲೋಗೋ ರಚಿಸಿದ ಕಲಾವಿದರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
