ನವದಹೆಲಿ, 28 ಡಿಸೆಂಬರ್(ಹಿ.ಸ):
ಆ್ಯಂಕರ್ :
೨೦೨೪ನೇ ಋತುವಿನ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಸಂಪುಟ ಸಮ್ಮತಿ ನೀಡಿದೆ.
ದೆಹಲಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಕಳೆದ ಋತುವಿಗೆ ಹೋಲಿಸಿದರೆ ಪ್ರತಿ ಕ್ವಿಂಟಾಲ್ ಒಣ ಕೊಬ್ಬರಿ ಗಿಟುಕಿಗೆ ೩೦೦ ರೂಪಾಯಿ ಹಾಗೂ ಕೊಬ್ಬರಿ ಉಂಡೆಗೆ ೨೫೦ ರೂಪಾಯಿ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ ಎಂದರು.
ಬೆಂಬಲ ಬೆಲೆ ಹೆಚ್ಚಳ ಮಾಡಿರುವುದರಿಂದ ತೆಂಗು ಬೆಳೆಗಾರರಿಗೆ ಉತ್ತಮ ಲಾಭ ಸಿಗಲಿದೆ. ೨೦೧೪-೧೫ರಲ್ಲಿ ಪ್ರತಿ ಕ್ವಿಂಟಾಲ್ ಒಣ ಕೊಬ್ಬರಿ ಗಿಟುಕಿಗೆ ೫ ಸಾವಿರದ ೨೫೦ ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಲಾಗಿತ್ತು. ೨೦೨೪-೨೫ರಲ್ಲಿ ಈ ಬೆಲೆ ಪ್ರತಿ ಕ್ವಿಂಟಾಲ್ಗೆ ೧೧ ಸಾವಿರದ ೧೬೦ ರೂಪಾಯಿಯಷ್ಟಿದೆ. ಉಂಡೆ ಕೊಬ್ಬರಿಗೆ ೨೦೨೪-೨೫ರಲ್ಲಿ ಕನಿಷ್ಠ ಬೆಂಬಲ ಬೆಲೆ ೧೨ ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ.
ಬಿಹಾರದಲ್ಲಿ ದಿಘಾ ಮತ್ತು ಸೋನೆಪುರ್ ಸಂಪರ್ಕಿಸುವ ಗಂಗಾನದಿಯ ಮೇಲೆ ೬ ಪಥದ ೪.೫೬ ಕಿಲೋಮೀಟರ್ ಸೇತುವೆ ನಿರ್ಮಾಣಕ್ಕೂ ಸಂಪುಟ ಸಮ್ಮತಿಸಿದೆ. ತ್ರಿಪುರಾದಲ್ಲಿ ೧೩೫ ಕಿಲೋಮೀಟರ್ ಉದ್ದದ ಖೊವೈ-ಹರಿನಾ ರಸ್ತೆ ಅಗಲೀಕರಣಕ್ಕೂ ಸಂಪುಟ ಸಮ್ಮತಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
