ದೆಹಲಿ, 26 ಡಿಸೆಂಬರ್(ಹಿ.ಸ):
ಆ್ಯಂಕರ್ :
ವೀರ್ ಬಾಲ್ ದಿವಸ್ ಆಚರಣೆಯು ದೇಶದ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಹೊಸ ಅಧ್ಯಾಯವನ್ನು ಆರಂಭ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯ ಭಾರತ ಮಂಟಪದಲ್ಲಿ ವೀರ್ ಬಾಲ್ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ. ಅರ್ಥಶಾಸ್ತ್ರ, ವಿಜ್ಞಾನ, ಸಂಶೋಧನೆ, ಕ್ರೀಡೆ, ನೀತಿ ಹೀಗೆ ಪ್ರತಿಯೊಂದು ರಂಗದಲ್ಲೂ ಭಾರತ ಹೊಸ ಎತ್ತರವನ್ನು ಸಾಧಿಸಲು ಶ್ರಮಿಸುತ್ತಿದೆ ಎಂದರು.
ಇದು ಭಾರತದ ಕಾಲ. ಕಳೆದ ವರ್ಷ ಡಿಸೆಂಬರ್ ೨೬ ರಂದು ಮೊದಲ ವೀರ್ ಬಾಲ್ ದಿವಸ್ ಆಚರಿಸಲಾಯಿತು. ವೀರ್ ಬಾಲ್ ದಿವಸ್ ದೇಶವನ್ನು ರಕ್ಷಿಸಲು ಸಂಕಲ್ಪ ಮಾಡುವ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಯುವಕ ಪಥ ಸಂಚಲನಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು. ಶ್ರೀ ಗುರು ಗೋಬಿಂದ್ ಸಿಂಗ್ ಅವರ ಮಕ್ಕಳಾದ ಸಾಹಿಬ್ಜಾದಾಸ್ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರು ಹುತಾತ್ಮರಾದ ಹಿನ್ನೆಲೆಯಲ್ಲಿ ಈ ದಿನದಂದು ಅವರನ್ನು ಸ್ಮರಿಸಲಾಗುತ್ತಿದೆ.
ಕಳೆದ ವರ್ಷ ಜನವರಿಯಲ್ಲಿ ಶ್ರೀ ಗುರು ಗೋವಿಂದ್ ಸಿಂಗ್ ಅವರ ಪ್ರಕಾಶ್ ಪುರಬ್ ದಿನದಂದು, ಡಿಸೆಂಬರ್ ೨೬ ಅನ್ನು ವೀರ್ ಬಾಲ್ ದಿವಸ್ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದರು ಎಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.
ಈ ಮಕ್ಕಳ ಧೈರ್ಯದ ಕಥೆಯನ್ನು ನಾಗರಿಕರಿಗೆ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ತಿಳಿಸಲು ಮತ್ತು ಶಿಕ್ಷಣ ನೀಡಲು ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ. ದೇಶಾದ್ಯಂತ ಶಾಲೆಗಳು, ಶಿಶುಪಾಲನಾ ಸಂಸ್ಥೆಗಳಲ್ಲಿ ಈ ಚಿಣ್ಣರ ಜೀವನ ಕಥೆ, ತ್ಯಾಗದ ಕುರಿತು ಡಿಜಿಟಲ್ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ವೀರ್ ಬಾಲ್ ದಿವಸ್ ಕುರಿತಾದ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಒಙಃhಚಿಡಿಚಿಣ ಮತ್ತು ಒಥಿಉov ಪೋರ್ಟಲ್ಗಳ ಮೂಲಕ ರಸಪ್ರಶ್ನೆಯಂತಹ ವಿವಿಧ ಆನ್ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್
