ಖೆರ್ಸನ್, 25 ಡಿಸೆಂಬರ್(ಹಿ.ಸ):
ಆ್ಯಂಕರ್ :
ದಕ್ಷಿಣ ಉಕ್ರೇನ್ ನ ಖೆರ್ಸನ್ ಪ್ರದೇಶದಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ನಾಲ್ವರು ಹತರಾಗಿದ್ದಾರೆ. ಅಪಾರ್ಟ್ಮೆಂಟ್ ಕಟ್ಟಡವೊಂದರ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ೮೭ ವರ್ಷದ ವ್ಯಕ್ತಿ ಮತ್ತು ಅವರ ೮೧ ವರ್ಷದ ಪತ್ನಿ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ. ಬ್ಯಾರೇಜ್ ದಾಳಿಯಿಂದಾಗಿ ಓರ್ವ ೧೫ ವರ್ಷದ ಬಾಲಕ ಸೇರಿದಂತೆ ಇತರ ಒಂಬತ್ತು ಜನರನ್ನು ಗಾಯಗೊಳಿಸಿದೆ ಎಂದು ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಪ್ರೊಕುಡಿನ್ ಹೇಳಿದ್ದಾರೆ. ಅಲ್ಲದೆ ಸುತ್ತಲ ಮನೆಗಳು, ಮತ್ತು ಸ್ಥಳೀಯ ಗ್ಯಾಸ್ ಪೈಪ್ಲೈನ್ಗೆ ಮತ್ತು ಖಾಸಗಿ ಆಸ್ಪತ್ರೆಗೆ ಬೆಂಕಿ ತಗುಲಿದೆ ಎಂದು ಅವರು ತಿಳಿಸಿದರು. ಪ್ರಥಮ ಬಾರಿಗೆ ಉಕ್ರೇನ್, ಅಧಿಕೃತವಾಗಿ ಕ್ರಿಸ್ಮಸ್ ಆಚರಿಸಲು ಸಿದ್ಧತೆ ನಡೆಸುತ್ತಿರುವಾಗ ಈ ದಾಳಿ ನಡೆದಿದೆ. ಈ ಹಿಂದೆ ಜನವರಿ ೭ ರಂದು ಕ್ರಿಸ್ಮಸ್ ಆಚರಣೆಗೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ರಷ್ಯಾ ಮತ್ತು ಉಕ್ರೇನ್ನ ಫೆಬ್ರವರಿ ೨೦೨೨ ರ ಸಂಘರ್ಷಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಕೆಲವು ಸಾಂಪ್ರದಾಯಿಕ ಉಕ್ರೇನಿಯನ್ಗಳು ಕಳೆದ ವರ್ಷ ಡಿಸೆಂಬರ್ ೨೫ ರಂದು ಕ್ರಿಸ್ಮಸ್ ಆಚರಿಸಿದ್ದರು. ರಷ್ಯಾದ ಸಾಂಪ್ರದಾಯಿಕ ಚರ್ಚ್ ಜನವರಿ ೭ ರಂದು ಯೇಸುವಿನ ಜನನ ಸಂಭ್ರಮ ಆಚರಿಸುತ್ತದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜುಲೈನಲ್ಲಿ, ಸಾರ್ವಜನಿಕ ಕ್ರಿಸ್ಮಸ್ ದಿನದ ರಜೆಯನ್ನು ಡಿಸೆಂಬರ್ ೨೫ ಕ್ಕೆ ಬದಲಾಯಿಸಿ ಶಾಸನಕ್ಕೆ ಸಹಿ ಹಾಕಿದ್ದರು.
ಹಿಂದೂಸ್ತಾನ್ ಸಮಾಚಾರ್
