ಬೆಂಗಳೂರು, 25 ಡಿಸೆಂಬರ್(ಹಿ.ಸ):
ಆ್ಯಂಕರ್ :
ಇಂದು ದೇಶದೆಲ್ಲೆಡೆ ಜನ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಿಸುತ್ತಿದ್ದಾರೆ. ಏಸುಕ್ರಿಸ್ತನ ಜನ್ಮ ದಿನದಂದು ಕ್ರಿಶ್ಚಿಯನ್ ಸಮುದಾಯದವರನ್ನು ಸೇರಿ ಅನ್ಯ ಸಮುದಾಯದವರು ಈ ಹಬ್ಬವನ್ನು ಪ್ರತಿ ವರ್ಷ ಸಡಗರದಿಂದ ಆಚರಿಸುತ್ತಾರೆ.
ನಿನ್ನೆ ತಡರಾತ್ರಿಯಿಂದಲೇ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಪ್ರಾರಂಭವಾಗಿದ್ದು ಜನರು ಅತ್ಯಂತ ಉತ್ಸಾಹದಿಂದ ಚರ್ಚ್ಗಳತ್ತ ತೆರಳಿ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ. ಚರ್ಚ್ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿ, ಏಸು ಕ್ರಿಸ್ತನ ಆಕರ್ಷಕ ಪ್ರತಿಮೆಗಳನ್ನಿಡುವುದರ ಜೊತೆಗೆ ಚರ್ಚ್ಗಳನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಹಬ್ಬಕ್ಕೆ ತಯಾರಿ ನಡೆಸಿದ್ದಾರೆ.
ಸಾಮೂಹಿಕ ಪ್ರಾರ್ಥನೆಗೆಂದು ಚರ್ಚ್ಗೆ ಆಗಮಿಸಿದವರು ಕೇಕ್ ಕತ್ತರಿಸಿ, ಸಿಹಿ ಹಂಚಿಕೊಂಡು ಪರಸ್ಪರ ಶುಭಾಶಯ ಕೋರಿಕೊಂಡಿದ್ದಾರೆ. ಇನ್ನು ಕ್ರಿಸ್ಮಸ್ ಆಚರಣೆಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೂಡ ಹಿಂದೆ ಬಿದ್ದಿಲ್ಲ. ತಮ್ಮ ಅಭಿಮಾನಿಗಳಿಗೆ ಶುಭಾಯಶಯ ಕೋರಿದೆ. ಎಕ್ಸ್ನಲ್ಲಿ ಮೇರಿ ಕ್ರಿಸ್ಮಸ್ಗೆ ವಿಶ್ ಮಾಡಿದೆ. ವಿಶೇಷ ಏನಪ್ಪ ಅಂದರೆ ಆರ್ಸಿಬಿ ತಂಡದ ಪ್ರಮುಖ ಆಟಗಾರರನ್ನು ಸಾಂಟಾ ಕ್ಲಾಸ್ ಹುಡುಗರಂತೆ ರೆಡಿ ಮಾಡಿ ಪೋಸ್ಟ್ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್
