ದೇವದುರ್ಗ, 20 ಡಿಸೆಂಬರ್(ಹಿ.ಸ): ದೇವದುರ್ಗ ತಾಲೂಕಿನ ಶಾಸಕಿ ಕರೆಮ್ಮ ನಾಯಕ ಮತ್ತು ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಗೆದ್ದು 8 ತಿಂಗಳ ಆಯಿತು ಅವರಿಗೆ ತಾಲೂಕಿನ ಅಭಿವೃದ್ಧಿ ಮಾಡಲು ಅಧಿಕಾರಿಗಳು ಅಸಹಾಕಾರ ಇರುವಂತೆ ಕಂಡು ಬರುತ್ತಿದೆ.
ಗೆದ್ದ ನಂತರ ಹಿಂದಿನ ಶಾಸಕರ ಅವಧಿಯ ಕೆಲಸ ಮುಂದುವರಿಸಲು ಒಂದು ದಿನವಾದರೂ ಸರ್ಕಾರದ ಮೇಲೆ ಒತ್ತಡ ಹಾಕಿಲ್ಲ, ಹಾಕಿದರೂ ಸರ್ಕಾರ ಅವರಿಗೆ ಸ್ಪಂದನೆ ನೀಡುತ್ತಿಲ ಎಂಬ ಪ್ರಶ್ನೆ ಎದುರಾಗಿದೆ.
ಶಾಸಕರಾದ ಮೇಲೆ ಒಂದೇ ಒಂದು ಗ್ರಾಮದಲ್ಲಿ ಕಾಮಗಾರಿ ಪೂಜೆ ನೇರವೇರಿಸಿಲ್ಲ, ಒಂದೇ ಒಂದು ಶಾಲೆ, ರೈತನಿಗೆ ಬೋರವೆಲ್ ಕೋರಿಸಿಲ್ಲ, ತಾಲೂಕಿನ ನ್ಯಾಯಾಲಯ ಸಂಕೀರ್ಣ ಕಟ್ಟಡ ಪೂರ್ಣಗೋಳಿಸಲು ಪ್ರಯತ್ನ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್, ಬಿಜೆಪಿ ವಿರುದ್ಧ ಮತ ನೀಡಿ ಜೆಡಿಎಸ್ ಗೆ ಜಯಗಳಿಸಿದ್ದಾರೆ, ಮತ್ತು ತಮಗೆ ಚುನಾವಣೆಯಲ್ಲಿ ಜಯಗಳಿಸಲು ಕಾರಣೀಭೂತರಾದ ಪಕ್ಷದ ಮುಖಂಡರನ್ನ ವಿಸ್ವಾಸಕ್ಕೆ ತೆಗೆದುಕೊಂಡು ದೇವದುರ್ಗ ಅಭಿವೃದ್ಧಿ ಮಾಡಲಿ ಎಂದು ಹೆಸರು ಹೇಳದ ಜೆಡಿಎಸ್ ಮುಖಂಡ ನ ಪತ್ರ ಸಾಮಾಜಿಕ ಜಾಲ ತಾಣ ದಲ್ಲಿ ಹರಿದಾಡುತ್ತಿದೆ
ಹಿಂದೂಸ್ತಾನ್ ಸಮಾಚಾರ್
