ಬಳ್ಳಾರಿ, 18 ಡಿಸೆಂಬರ್(ಹಿ.ಸ):
ಆ್ಯಂಕರ್ : ರೂಪನಗುಡಿ ಗ್ರಾಮದ ಬಾರಿಕರ ಓಣಿಯ 1ನೇ ವಾರ್ಡ್ನ ನಿವಾಸಿ ಗೌರಿ (17) ಕಾಣೆಯಾಗಿರುವ ಕುರಿತು ಪಿ.ಡಿ.ಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ಪೆಕ್ಟರ್ ಅವರು ತಿಳಿಸಿದ್ದಾರೆ.
ಯುವತಿಯ ಚಹರೆ ಗುರುತು: ಎತ್ತರ 5.5 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಹೊಂದಿದ್ದು, ಆಕಾಶ ನೀಲಿ ಬಣ್ಣದ ಸ್ಕರ್ಟ್, ನೀಲಿ ಬಣ್ಣದ ಪ್ಯಾಂಟ್ ಮತ್ತು ವೇಲು ಧರಿಸಿರುತ್ತಾಳೆ.
ಯುವತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿ.ಡಿ.ಹಳ್ಳಿ ಪೆÇಲೀಸ್ ಠಾಣೆಯ ದೂ.08392-265010, ಪಿ.ಡಿ.ಹಳ್ಳಿ ವೃತ್ತ ಸಿಪಿಐ ದೂ.08392-276461, ಸಿರುಗುಪ್ಪ ಉಪವಿಭಾಗ ಡಿ.ಎಸ್.ಪಿ ದೂ.08396-276000, ಬಳ್ಳಾರಿ ಎಸ್.ಪಿ ದೂ.08932-258400 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392258100 ಗೆ ಸಂಪರ್ಕಿಸಬಹುದು.
