
ಬೆಂಗಳೂರು, 18 ಡಿಸೆಂಬರ್(ಹಿ.ಸ):
ಆ್ಯಂಕರ್ :
ಹಿರಿಯ ನಟಿ ಲೀಲಾವತಿ ಅವರು ನಮ್ಮನ್ನು ಅಗಲಿ 11 ದಿನ ಕಳೆದಿದೆ. ಇಂದು (ಡಿಸೆಂಬರ್ 18) ಅವರ ವೈಕುಂಠ ಸಮಾರಾಧನೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್ 8ರಂದು ಲೀಲಾವತಿ ನಮ್ಮನ್ನು ಅಗಲಿದ್ದರು. ನೆಲಮಂಗಲ ಬಳಿಯ ಸೋಲದೇವನಹಳ್ಳಿಯ ಲೀಲಾವತಿ ನಿವಾಸದಲ್ಲಿ ವೈಕುಂಠ ಸಮಾರಾಧನೆ ನಡೆಯಲಿದೆ. ಇಂದಿನ ಕಾರ್ಯವನ್ನು ಮಗ ವಿನೋದ್ ರಾಜ್ ಅವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 12.30ರ ನಂತರ ಪೂಜಾ ಕಾರ್ಯ ಆರಂಭ ಆಗಲಿದೆ. ಕುಟುಂಬದವರು, ಕಲಾವಿದರು, ಗಣ್ಯರು, ಆಪ್ತರು ಲೀಲಾವತಿ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಸಮಾಧಿಗೆ ಈಗಾಗಲೇ ಹೂವಿನ ಹಾರದಿಂದ ಅಲಂಕಾರ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್
