
ಚಿಕ್ಕಮಗಳೂರು,, 18 ಡಿಸೆಂಬರ್(ಹಿ.ಸ):
ಆ್ಯಂಕರ್ :
ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಭೂ ಅಕ್ರಮಕ್ಕೆ ಸಾಕ್ಷಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದಿನಿಂದ ಸರ್ಕಾರಿ ಭೂಮಿ, ಅರಣ್ಯ ಭೂಮಿಗಳ ಸರ್ವೆ ಕಾರ್ಯ ಆರಂಭವಾಗಲಿದೆ. ಸರ್ಕಾರಿ ಭೂಮಿಗಳ ಅಕ್ರಮ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಜಮೀನುಗಳ ಸರ್ವೆ ನಡೆಸಲು 15 ಭೂಮಾಪಕರ ತಂಡ ರಚನೆ ಮಾಡಿ ಆದೇಶಿಸಿತ್ತು.
ಅದರಂತೆ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇಂದಿನಿಂದ ವಿಶೇಷ ತಂಡ ಸರ್ವೆ ಕಾರ್ಯ ನಡೆಸಲಿದೆ. ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ, ಸರ್ಕಾರಿ ಭೂಮಿ ಕಬಳಿಕೆ ಮಾಡಲಾಗಿರುವುದರಿಂದ ಜಿಲ್ಲೆಯಲ್ಲಿ ಅರಣ್ಯ ಮತ್ತು ಸರ್ಕಾರಿ ಭೂಮಿ ಕೊರತೆಯಾಗಿದೆ.
ಜಿಲ್ಲೆಯಲ್ಲಿ ಒಂದು ಅಲ್ಲ ಎರಡೂ ಅಲ್ಲ, ಸಾವಿರಾರು ಎಕರೆ ಭೂಮಿ ಭೂಗಳ್ಳರ ಪಾಲಾಗಿದೆ. ಅತಿ ದೊಡ್ಡ ಭೂ ಅಕ್ರಮದ ತನಿಖೆಗಿಳಿದ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದ 750 ಎಕರೆ ಜಮೀನನ್ನು ಈಗಾಗಲೇ ರದ್ದು ಮಾಡಿದ್ದಾರೆ. ಕೇವಲ ಇನ್ನೂ 245 ಪ್ರಕರಣಗಳ ವಿಚಾರಣಗಳ ಪೈಕಿ ಈ ಪರಿಯ ಅಕ್ರಮ ಜಮೀನು ದೊರೆತಿದ್ದು, ನಿಜಕ್ಕೂ ಆಶ್ಚರ್ಯ ಮೂಡಿಸಿದೆ. 2019ರಿಂದ 2021ರವರೆಗೆ ನಡೆದಿರುವ ಕಡತಗಳ ವಿಚಾರಣೆ ನಡೆಸಿದ ಅಧಿಕಾರಿಗಳು ಈ ಪರಿಯ ಒತ್ತುವರಿ ನೋಡಿ ಬೆಚ್ಚಿಬಿದ್ದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
