
ಬೆಂಗಳೂರು, 17 ಡಿಸೆಂಬರ್(ಹಿ.ಸ):
ಆ್ಯಂಕರ್ :
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫುಲ್ ಕೂಲ್ ಕೂಲ್ ವೆದರ್ ಇದೆ . ನಗರದಲ್ಲಿ ಅಧಿಕೃತವಾಗಿ ಚಳಿಗಾಲ ಆರಂಭವಾಗಿದ್ದು ವಾತಾವರಣ ತಂಪಾಗಿದೆ. ಕಳೆದ ಎರಡು ದಿನದಿಂದ ಚಳಿಯ ವಾತಾವರಣ ಹೆಚ್ಚಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಚಳಿಯ ವಾತಾವರಣ ಕಂಡುಬರುತ್ತಿದೆ. ಹಗಲಲ್ಲೂ ಮೋಡ ಕವಿದ ವಾತಾವರಣ ಇದೆ. ಬಿಸಿಲಿನಲ್ಲಿಯೂ ಚಳಿಯ ಅನುಭವವಾಗುತ್ತಿದೆ. ಸಿಲಿಕಾನ್ ಸಿಟಿ ಈಗ ಕೂಲ್ ಸಿಟಿಯಾಗಿದೆ.
ನಗರದಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇದ್ದು ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ, ಬೆಂಗಳೂರಿನಲ್ಲಿಯು ಉಷ್ಣಾಂಶ ಇಳಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಬೆಂಗಳೂರು ನಗರ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೆಚ್ಎಎಲ್ನಲ್ಲಿ ಕನಿಷ್ಠ ಉಷ್ಣಾಂಶ ಕಂಡುಬಂದಿದೆ. ಒಂದು ದಿನದ ಹಿಂದೆ 15 ರಿಂದ 17 ಡಿಗ್ರಿಯಷ್ಟು ಕನಿಷ್ಠ ಉಷ್ಣಾಂಶ ದಾಖಾಲಾಗಿತ್ತು. ಇದೀಗಾ ನಗರದಲ್ಲಿ ಮುಸುಕಿನ ವಾತಾವರಣ ಕಂಡುಬರುತ್ತಿದ್ದು ಬೆಂಗಳೂರು ಈಗ ಊಟಿ, ಕೊಡಗಿನಂತಾಗಿದೆ. ಹೀಗಾಗಿ ಕಬ್ಬನ್ ಪಾರ್ಕ್, ಲಾಲ್ ಬಾಗ್ಗಳಲ್ಲಿ ಕೂಲ್ ವೆದರನ್ನ ಸಿಲಿಕಾನ್ ಸಿಟಿ ಮಂದಿ ಎಂಜಾಯ್ ಮಾಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
