ವಾಷಿಂಗ್ಟನ್,17 ಡಿಸೆಂಬರ್(ಹಿ.ಸ):
ಆ್ಯಂಕರ್ : ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಯಾಗುತ್ತಿರುವುದರಿಂದ ಅಮೆರಿಕದಲ್ಲಿರುವ ಹಿಂದೂ ಸಮುದಾಯದ ಸದಸ್ಯರು ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಕಾರ್ ರ್ಯಾಲಿಯನ್ನು ಆಯೋಜಿಸಿ ಒಂದು ತಿಂಗಳ ಆಚರಣೆಗೆ ಚಾಲನೆ ನೀಡಿದ್ದಾರೆ. ಫ್ರೆಡೆರಿಕ್ ಸಿಟಿ ಮೇರಿಲ್ಯಾಂಡ್ ಬಳಿಯ ಅಯೋಧ್ಯಾ ಮಾರ್ಗದಲ್ಲಿರುವ ಶ್ರೀ ಭಕ್ತ ಆಂಜನೇಯ ದೇವಸ್ಥಾನದಲ್ಲಿ ನೂರಾರು ಮಂದಿ ಜಮಾಯಿಸಿದರು.
22-1-2024 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಭವ್ಯ ಉದ್ಘಾಟನೆ ನಿಗದಿಯಾಗಿದ್ದು ಅದಕ್ಕೆ ಪೂರಕವಾಗಿ ಇಂದಿನಿಂದ ಅಮೆರಿಕದಲ್ಲಿ ಒಂದು ತಿಂಗಳ ಆಚರಣೆಯನ್ನು ಪ್ರಾರಂಭಿಸಿತು ಎಂದು ಸಂಘಟಕರು ಹೇಳಿದರು. ಹಿಂದೂಗಳ 500 ವರ್ಷಗಳ ಹೋರಾಟದ ನಂತರ, ಭಗವಾನ್ ಶ್ರೀರಾಮ ಮಂದಿರವನ್ನು ಉದ್ಘಾಟಿಸಲಾಗುತ್ತಿದೆ ಮತ್ತು ನಾವು ಇಲ್ಲಿ ಸುಮಾರು 1,000 ಹಿಂದೂ ಕುಟುಂಬಗಳೊಂದಿಗೆ ಮುಂದಿನ ವರ್ಷ ಜನವರಿ 20 ರಂದು ವಾಷಿಂಗ್ಟನ್, ಡಿಸಿ ಪ್ರದೇಶದಲ್ಲಿ ಐತಿಹಾಸಿಕ ಆಚರಣೆಯನ್ನು ಆಯೋಜಿಸುತ್ತಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಆಫ್ ಅಮೇರಿಕಾ ಡಿಸಿ ಘಟಕದ ಮಹೇಂದ್ರ ಸಾಪಾ ಹೇಳಿದರು.
ಹಿಂದೂಸ್ತಾನ್ ಸಮಾಚಾರ್
