
ಬೆಂಗಳೂರು, 17 ಡಿಸೆಂಬರ್(ಹಿ.ಸ):
ಆ್ಯಂಕರ್ :
ಕೊವಿಡ್ ಮುಗಿಯದ ಕಥೆ. ವೈರಸ್ ಜೊತೆ ಬದುಕಲು ಕಲಿಯಬೇಕು ಎಂದು ಹೇಳುವ ವೈದ್ಯರ ಮಾತು ಪದೇ ಪದೇ ಪ್ರೂವ್ ಆಗ್ತಿದೆ. ವರ್ಷಗಳಿಂದ ಸೈಲೆಂಟ್ ಇದ್ದ ವುಹಾನ್ ವೈರಸ್ ಹೊಸ ರೂಪದೊಂದಿಗೆ ಮತ್ತೆ ವೈಲೆಂಟ್ ಆಗಲು ಹೊಂಚು ಹಾಕಿದೆ. ವೈರಲ್ ಫೀವರ್ ಹಾಗೂ ಸಾಂಕ್ರಾಮಿಕ ಖಾಯಿಲೆಗಳ ನಡುವೆ ರಾಜ್ಯದಲ್ಲಿ ಕೊವಿಡ್ ಆತಂಕ ಶುರುವಾಗಿದೆ. ಇಷ್ಟು ದಿನ ಸೈಲೆಂಟ್ ಇದ್ದ ಕೊರೊನಾ ಈಗ ಮತ್ತೆ ರೂಪ ಬದಲಿಸಿ ಆರ್ಭಟಿಸಲು ಮುಂದಾಗಿದೆ. ಓಮಿಕ್ರಾನ್ನ ಉಪ ತಳಿಯಾದ ಜೆಎನ್.1 ಆತಂಕ ಶುರುವಾಗಿದೆ.
ದೇವರನಾಡು ಕೇರಳಾದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಹೀಗಾಗಿ ನಮ್ಮಲಿಯೂ ಕೊರೊನಾ ಆತಂಕ ಮತ್ತೆ ಶುರುವಾಗಿದೆ. ಕಳೆದ ಮೂರು ವರ್ಷದಿಂದ ಭಾರತದಲ್ಲಿ ಮೊದಲ ಪ್ರಕರಣ ಕೇರಳದಲ್ಲೇ ಕಂಡು ಬಂದಿತ್ತು. ಈಗ ಮತ್ತೆ ಅದೇ ರಾಜ್ಯದಲ್ಲಿ ಸಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿದೆ. ಕೇರಳದಲ್ಲಿನ ಕೊರೊನಾ ಏರಿಕೆ ಆತಂಕ ರಾಜ್ಯಕ್ಕೆ ಡವ ಡವ ಶುರುವಾಗಿದೆ.
ಈಗಾಗಲೇ ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊರೊನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಈ ನಡುವೆ ಕೇರಳದಲ್ಲೂ ಕೊರೊನಾ ಏರಿಕೆ ಕಂಡಿದೆ. ಓಮಿಕ್ರಾನ್ನ ಉಪ ತಳಿಯಾದ ಜೆಎನ್.1 ಹೆಚ್ಚಳವು ಪಕ್ಕದ ರಾಜ್ಯ ಕೇರಳದಲ್ಲಿ ಈಗ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಮ್ಮಲ್ಲಿಯೂ ಕೊರೊನಾ ಏರಿಕೆಯ ಆತಂಕ ಶುರುವಾಗಿದೆ.
ಹಿಂದೂಸ್ತಾನ್ ಸಮಾಚಾರ್
