
ಬ್ರಿಸ್ಬೇನ್,14 ಡಿಸೆಂಬರ್(ಹಿ.ಸ):
ಆ್ಯಂಕರ್ :
ಈಶಾನ್ಯ ಆಸ್ಟ್ರೇಲಿಯಾದ ಕರಾವಳಿ ಕಡೆಗೆ ಜಾಸ್ಪರ್ ಚಂಡಮಾರುತ ಬರುತ್ತಿರುವುದರಿಂದ ಪ್ರಬಲವಾದ ಗಾಳಿ ಬೀಸುತ್ತಿದ್ದು,ವಾಹನ ಸಂಚಾರ ಬಂದ್ ಮಾಡಿ ಎಚ್ಚರಿಕೆ ಸಮದೇಶ ನೀಡಲಾಗಿದೆ.ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೇನ್ಸ್ರ್ ವಿಮಾನ ನಿಲ್ದಾಣವನ್ನು ತಡರಾತ್ರಿ ಮುಚ್ಚಲಾಗಿದೆ. ನಿನ್ನೆ ರಾತ್ರಿ ವೇಳೆಗೆ ಆಸ್ಟ್ರೇಲಿಯಾದ ಕರಾವಳಿಯನ್ನು ದಾಟುವ
ಜಾಸ್ಪರ್ ಚಂಡಮಾರುತದಿಂದ ಈಗಗಾಲೆ ಅವಾಂತರ ಸೃಷ್ಠಿಯಾಗಿದೆ. ಕರಾವಳಿ ಸಮೀಪದಲ್ಲಿರುವ ಮರಗಳು ಬುಡಮೇಲಾಗಿದೆ.ತಗ್ಗು ಪ್ರದೇಶಗಳಲ್ಲಿನ ಮನೆಗಳು ಹಾನಿಯಾಗಿದೆ.
ಚಂಡಮಾರುತವು ಕ್ವೀನ್ಸ್ಲ್ಯಾಂಡ್ ಕರಾವಳಿಯನ್ನು ದಾಟುವ ಸಾಧ್ಯತೆ ಇದ್ದು,ಕೇನ್ರ್ಸ್ ನಗರದಿಂದ ಉತ್ತರಕ್ಕೆ ಹೋಪ್ ವೇಲ್ವರೆಗೆ ವಿರಳ ಜನಸಂಖ್ಯೆಯ ಪ್ರದೇಶ ಹಾದು ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆಯಿದೆ ಗಾಳಿಯ ವೇಗ 200 ರಿಂದ 140 ಕಿ.ಮಿ ಇರಬಹುದು,ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಕ್ವೀನ್ಸ್ಲ್ಯಾಂಡ್ ರಾಜ್ಯ ಉಪ ಪ್ರೀಮಿಯರ್ ಸ್ಟೀವನ್ ಮೈಲ್ಸ್ ಬ್ರಿಸ್ಬೇನ್ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್
