


ರಾಯಚೂರು, 10 ಡಿಸೆಂಬರ್(ಹಿ.ಸ):
ಆ್ಯಂಕರ್ : ರಾಯಚೂರಿನ ಜನತೆಗೆ ತೊಂದರೆಯಾಗದಂತೆ, ಕಛೇರಿಗೆ ಅಲೆದಾಡುವುದನ್ನು ತಪ್ಪಿಸಲು ಒಂದೆ ಸೂರಿನಡಿ ಸೌಲಭ್ಯಗಳ ಇತ್ಯರ್ಥಕ್ಕಾಗಿ ಇ-ಖಾತ- ಸಕಾಲ ಸೇವೆ ಕೌಂಟರ್ ತೆರೆಯಲಾಗಿದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದ್ದಾರೆ.
ರಾಯಚೂರು ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಯೋಗದೊಂದಿಗೆ ನಗರಸಭೆ ಯಲ್ಲಿ ಇ-ಖಾತ ಸಕಾಲ ಸೇವೆ (ಸಿಂಗಲ್ ವಿಂಡೋ ಸಿಸ್ಟಮ್) ಕೌಂಟರ್ ಗಳನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ಪೌರಾಯುಕ್ತರಾದ ಗುರುಸಿದ್ದಯ್ಯ ಹಿರೇಮಠ್ ಮಾತನಾಡಿ, ಸಾರ್ವಜನಿಕರು ತಮ್ಮ ಆಸ್ತಿಗಳ ಇ-ಖಾತ, ಮುಟೇಷನ್, ತಿದ್ದುಪಡಿ, ತೆರಿಗೆ ಪಾವತಿ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಇ-ಖಾತ ಸಕಾಲ ಸೇವೆ (ಸಿಂಗಲ್ ವಿಂಡೋ ಸಿಸ್ಟಮ್) ಕೌಂಟರ್ ಒಪನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೂಲಭೂತ ಸಮಸ್ಯೆಗಳ ಇತ್ಯರ್ಥಕ್ಕಾಗಿ ಹಾಗೂ ವಿವಿಧ ಸೌಲಭ್ಯಗಳಿಗಾಗಿ ನಗರಸಭೆ ಕಚೇರಿಗೆ ಅಲೆದಾಡುವ, ಮಧ್ಯವರ್ತಿಗಳೊಂದಿಗೆ ವ್ಯವಹರಿಸುವ ಅವಶ್ಯವಿಲ್ಲ ಜನರಿಗೆ ಅನುಕೂಲವಾಗಲಿ ಈ ಕೌಂಟರ್ ತೆರೆಯಲಾಗಿದೆ ಎಲ್ಲರು ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಪ್ರತಿ ನಾಲ್ಕು ವಾರ್ಡ್ ಗಳಿಗೆ ಒಂದು ಕೌಂಟರ್ ನಂತೆ 8 ಕೌಂಟರ್ ಗಳನ್ನು ಪ್ರಾರಂಭಿಸಲಾಗಿದೆ ಸರ್ಕಾರಿ ಸಮಯದಲ್ಲಿ ಸಕಾಲ ಸೇವೆ ನಿಗಲಿದೆ. ಈ ಸಕಾಲ ಸೇವೆ ಸೌಲಭ್ಯವನ್ನು ರಾಯಚೂರಿನ ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು.
ಈ ಸಂದರ್ಭದಲ್ಲಿ ಪೌರಾಯುಕ್ತರಾದ ಹಿರಿಯ ನಗರ ಸಭೆ ಸದಸ್ಯರಾದ ಜಯಣ್ಣ, ಶಾಂತಪ್ಪ, ಜಿಂದಪ್ಪ, ಬಸವರಾಜರಡ್ಡಿ, ರಮೇಶ, ಭೀಮರಾಯ್, ಶಾಂತಪ್ಪ, ನರಸಿಂಹಲು ಮಾಡಗಿರಿ, ಆಂಜನೇಯ್ಯ ಕಡಗೋಲ್, ದರೂರ್ ಬಸವರಾಜ್, ಹರಿಬಾಬು, ತಿಮ್ಮಪ್ಪ ನಾಯಕ್, ತಿಮ್ಮಾರಡ್ಡಿ, ನರಸರಡ್ಡಿ ಸೇರಿದಂತೆ ನಗರಸಭೆ ಸದಸ್ಯರು ಉದ್ಘಾಟಿಸಿ ಅಧಿಕೃತವಾಗಿ ಸಕಾಲ ಸೇವೆಗೆ ಚಾಲನೆ ನೀಡಿದರು.
