


ಕೊಟ್ಟೂರು, 8 ಡಿಸೆಂಬರ್(ಹಿ.ಸ):
ಆ್ಯಂಕರ್ : ವಿದ್ಯಾರ್ಥಿಗಳು ಸದೃಢ ದೇಹದ ಜೊತೆ ಸದೃಢವಾದ ಮನಸ್ಸನ್ನು ಹೊಂದಿ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ಪೊಲೀಸ್ ಸಬ್ಇನ್ಪೆಕ್ಟರ್ ಗೀತಾಂಜಲಿ ಸಿಂಧೆ ಅವರು ಕರೆ ನೀಡಿದ್ದಾರೆ.
ಕೊಟ್ಟೂರಿನ ಇಂದು ಸಿಬಿಎಸ್ಇ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆಟಗಳಲ್ಲಿ ಭಾಗವಹಿಸಲು ಸಮಯವನ್ನು ಕೊಡಿರಿ. ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ಆಟಗಳಲ್ಲಿ ಪಾಲ್ಗೊಳ್ಳಿರಿ ಎಂದು ಅವರು ಹೇಳಿದರು.
ಇಂದು ಶಾಲೆಯ ಆಡಳಿತಾಧಿಕಾರಿ ಎಚ್.ಎನ್. ವೀರಭದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ವಿದ್ಯಾರ್ಥಿಗಳ ಯಶಸ್ಸು ಪಾಲ್ಗೊಳ್ಳುವಿಕೆ, ಜಾಣ್ಮೆ, ಸಕಾಲಿಕ ನಿರ್ಧಾರ, ಸವಾಲುಗಳನ್ನು ಎದುರಿಸುವ ಸಾಮಥ್ರ್ಯವನ್ನು ಆಧರಿಸಿ ನಿರ್ಧಾರಗೊಳ್ಳಬೇಕು ಎಂದರು.
ಶಾಲೆಯ ಪ್ರಾಂಶುಪಾಲ ಎ. ಚೇತನಕುಮಾರ್, ಮುಖ್ಯಗುರುಗಳಾದ ಬಿ. ಬಸವರಾಜ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ವಾಗೀಶಯ್ಯ ಪಿ.ಎಂ. ಪಿ.ಯುಕಾಲೇಜಿನ ಪ್ರಾಂಶುಪಾಲ ಪವನ್ ಕುಮಾರ್ ವೇದಿಕೆಯಲ್ಲಿದ್ದರು.
ಶಿಕ್ಷಕಿ ಡಿ. ವಾಣಿ ಸ್ವಾಗತಿಸಿದರು. ಶಿಕ್ಷಕಿ ಬಿ.ವಿ. ಪ್ರೇಮ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಅವರು ವಂದಿಸಿದರು.
