ದೆಹಲಿ,6 ಡಿಸೆಂಬರ್(ಹಿ.ಸ):
ಆ್ಯಂಕರ್ :ವಿಶ್ವದ ಖ್ಯಾತ ಕಾಲ್ಚೆಂಡು ಚತುರ ಲಿಯೋನೆಲ್ ಮೆಸ್ಸಿ ಟೈಮ್ ನಿಯತಕಾಲಿಕೆಯ ವರ್ಷದ ಕ್ರೀಡಾಪಟು ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷ ಎಂದರೆ ಟೈಮ್ ಮ್ಯಾಗಝಿನ್ನ ಈ ಗೌರವಕ್ಕೆ ಪಾತ್ರವಾದ ಮೊದಲ ಫುಟ್ಬಾಲ್ ಆಟಗಾರ ಮೆಸ್ಸಿ. ಇದರೊಂದಿಗೆ ಅರ್ಜೇಂಟೀನಾ ತಾರೆ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ.
ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟೀನಾವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಲಿಯೋನೆಲ್ ಮೆಸ್ಸಿ ಕೆಲ ದಿನಗಳ ಹಿಂದೆಯಷ್ಟೇ 8ನೇ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ವಾರಗಳ ಅಂತರದಲ್ಲಿ ಟೈಮ್ ಮ್ಯಾಗಝಿನ್ನ ವರ್ಷದ ಅಥ್ಲೀಟ್ ಎಂದು ಹೆಸರಿಸಲ್ಪಟ್ಟ ಮೊದಲ ಫುಟ್ಬಾಲ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಸುದ್ದಿ ನಿಯತಕಾಲಿಕೆ ‘ಟೈಮ್’ ವರ್ಷದ ಕ್ರೀಡಾಪಟುಗಳ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿಗೆ ಪ್ರತಿಸ್ಪರ್ಧಿಯಾಗಿ ಫ್ರಾನ್ಸ್ನ ಫುಟ್ಬಾಲ್ ತಾರೆ ಕೈಲಿಯನ್ ಎಂಬಾಪ್ಪೆ ಮತ್ತು ಮ್ಯಾಂಚೆಸ್ಟರ್ ಸಿಟಿಯ ನಾರ್ವೇಜಿಯನ್ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಇದ್ದರು.
ಹಿಂದೂಸ್ತಾನ್ ಸಮಾಚಾರ್
