ಇಸ್ಲಾಮಾಬಾದ್, 5 ಡಿಸೆಂಬರ್(ಹಿ.ಸ):
ಆ್ಯಂಕರ್ :
: ಖಲಿಸ್ತಾನಿ ಭಯೋತ್ಪಾದಕ ಲಖ್ಖೀರ್ ಸಿಂಗ್ ರೋಡ್ ಹೃದಯಾಘಾತದಿಂದ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಅವರ ಸೋದರಳಿಯ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ (72), ಭಿದ್ರಾನ್ವಾಲೆ ಸಾವಿನ ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಡಿ.2 ರಂದು ಲಖ್ಖೀರ್ ಕೂಡ ಮೃತಪಟ್ಟಿದ್ದಾನೆ.
ಲಖ್ಖೀರ್ ಸಿಂಗ್ ರೋಡ್ ನಿಷೇಧಿತ ಸಂಘಟನೆ ‘ಖಲಿಸ್ತಾನ್ ಜಿಂದಾಬಾದ್ ಫೋರ್ಸ್’ ಮುಖ್ಯಸ್ಥನಾಗಿದ್ದ. ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಗುಪ್ತಚರ ಸಂಸ್ಥೆಗಳ ಪ್ರಕಾರ, ಆತ ಲಾಹೋರ್ನಲ್ಲಿ ವಾಸಿಸುತ್ತಿದ್ದ.
ಪಂಜಾಬ್ಗೆ ಡ್ರಗ್ಸ್, ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಬಾಂಬ್ಗಳನ್ನು ಕಳುಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈತ ರಾಜ್ಯದ ಪ್ರಮುಖ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಶಂಕಿಸಲಾಗಿತ್ತು. ಒಮ್ಮೆ ಆತನನ್ನು ನೇಪಾಳದಲ್ಲಿ 20 ಕೆಜಿ ಸ್ಫೋಟಕ ಆರ್ಡಿಎಕ್ಸ್ನೊಂದಿಗೆ ಬಂಧಿಸಲಾಗಿತ್ತು. ಸ್ಫೋಟಕವನ್ನು ಪಾಕಿಸ್ತಾನದಿಂದ ತಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದ.
ಹಿಂದೂಸ್ತಾನ್ ಸಮಾಚಾರ್
