ನವದೆಹಲಿ, 5 ಡಿಸೆಂಬರ್(ಹಿ.ಸ):
ಆ್ಯಂಕರ್ :
ಭಾರತದಲ್ಲಿ ಅತ್ಯಂತ ಜಟಿಲವಾದ ವಲಯವೆಂದರೆ ವೈಮಾನಿಕ ಕ್ಷೇತ್ರದ್ದು. ಲಭ ಗಳಿಸುವ ಏರ್ಲೈನ್ಸ್ ಕಂಪನಿಗಳು ವಿರಳ. ಹಾಗೆಯೇ, ಏರ್ಪೋರ್ಟ್ಗಳೂ ಕೂಡ ಲಾಭಕ್ಕಾಗಿ ತಡಕಾಡಬೇಕಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್ ಡಾ. ವಿ.ಕೆ. ಸಿಂಗ್ ಇಂದು ಮಂಗಳವಾರ ಸಂಸತ್ಗೆ ನೀಡಿರುವ ಮಾಹಿತಿ ಪ್ರಕಾರ, ಭಾರತದ ಹೆಚ್ಚಿನ ವಿಮಾನ ನಿಲ್ದಾಣಗಳು ನಷ್ಟದಲ್ಲಿವೆಯಂತೆ. ಕಳೆದ ಮೂರು ಹಣಕಾಸು ವರ್ಷಗಳ ವರದಿಗಳನ್ನು ಆಧರಿಸಿ ಸಚಿವರು ಈ ಮಾಹಿತಿ ನೀಡಿದ್ದಾರೆ. ದೇಶದ 125 ಏರ್ಪೋರ್ಟ್ಗಳ ಪೈಕಿ 93 ವಿಮಾನ ನಿಲ್ದಾಣಗಳು 2022-23ರಲ್ಲಿ ನಷ್ಟ ಅನುಭವಿಸಿವೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕೆಲವೇ ಏರ್ಪೋರ್ಟ್ಗಳು ಲಾಭ ಮಾಡಿವೆ. ಅತಿ ಹೆಚ್ಚು ಲಾಭ ಕಂಡಿರುವುದು ಬೆಂಗಳೂರಿನ ವಿಮಾನ ನಿಲ್ದಾಣವೇ.
ಹಿಂದೂಸ್ತಾನ್ ಸಮಾಚಾರ್
