ಲಕ್ನೋ, 4 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಹಾಗೂ ತೆಲಂಗಾಣ ಈ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಭಾನುವಾರ ಹೊರಬಿದ್ದಿದೆ. ಈ ಚುನಾವಣಾ ಫಲಿತಾಂಶದ ಕುರಿತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿಶ್ಲೇಷಣೆ ಮಾಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿತೆ ಬರೆದುಕೊಂಡಿದ್ದಾರೆ. ಇಡೀ ಚುನಾವಣೆಯ ವಾತಾವರಣವನ್ನು ಅವಲೋಕಿಸಿದಾಗ ಅನುಮಾನ, ಆಶ್ಚರ್ಯ, ಆತಂಕ ಕಾಡುವುದು ಸಹಜ. ಈ ವಿಚಿತ್ರ ಫಲಿತಾಂಶವು ಜನರಿಗೆ ಆಘಾತವನ್ನುಂಟು ಮಾಡಿತು ಎಂದಿದ್ದಾರೆ.
ಎಕ್ಸ್ ನಲ್ಲಿ ಏನಿದೆ..?: ಇತ್ತೀಚೆಗಷ್ಟೇ ನಡೆದ ದೇಶದ ನಾಲ್ಕು ರಾಜ್ಯಗಳ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಏಕಪಕ್ಷೀಯವಾಗಿದ್ದು, ಇಡೀ ಚುನಾವಣೆಯ ವಾತಾವರಣವನ್ನು ಅವಲೋಕಿಸಿದಾಗ ಜನರೆಲ್ಲರಿಗೂ ಅನುಮಾನ, ಆಶ್ಚರ್ಯ, ಆತಂಕ ಕಾಡುವುದು ಸಹಜ. ಇಂತಹ ವಿಚಿತ್ರ ಫಲಿತಾಂಶವು ಜನರಿಗೆ ಆಘಾತವನ್ನುಂಟು ಮಾಡಿತು ಎಂದಿದ್ದಾರೆ. ಇದನ್ನೂ ಓದಿ: ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ
ಹಿಂದೂಸ್ತಾನ್ ಸಮಾಚಾರ್
