ಬೆಳಗಾವಿ, 2 ಡಿಸೆಂಬರ್(ಹಿ.ಸ):
ಆ್ಯಂಕರ್ :
ಬೆಳಗಾವಿ ಸುವರ್ಣಸೌಧದಲ್ಲಿ ಸೋಮವಾರ (ಡಿ.04) ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನ ಆರಂಭದಲ್ಲೇ ಚೀನಾ ವೈರಸ್ ಭೀತಿ ಶುರುವಾಗಿದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಯಾವುದು ಆತಂಕವಿಲ್ಲ. ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ಮಾಡಿದ್ದೇವೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ತಾಲೂಕು, ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿದ್ದಪಡಿಸಿದ್ದೇವೆ. ಬಿಮ್ಸ್ ಆಸ್ಪತ್ರೆಯಲ್ಲಿ ಹತ್ತು ಬೆಡ್ನ ವಾರ್ಡ್ ಸಿದ್ದಪಡಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ಅಧಿವೇಶನದ ವೇಳೆ ಶಾಸಕರು, ಸಚಿವರು, ಅಧಿಕಾರಿಗಳು ತಂಗುವ ಹೊಟೆಲ್ಗಳಿಗೆ ವಿಶೇಷ ವೈದ್ಯರ ತಂಡ ನೇಮಕ ಮಾಡಿದ್ದೇವೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿ ಹೊಟೆಲ್ ಮುಂದೆ ಒಂದೊಂದು ಆಂಬ್ಯುಲೆನ್ಸ್ ಇರುತ್ತದೆ. ಅಧಿವೇಶನಕ್ಕೆಂದು ಸುಮಾರು 17 ಜನರ ವಿಶೇಷ ವೈದ್ಯರ ತಂಡವನ್ನ ರಚನೆ ಮಾಡಿದ್ದೇವೆ. ಸುವರ್ಣ ವಿಧಾನಸೌಧದಲ್ಲೇ ಒಂದು ಮಿನಿ ಆಸ್ಪತ್ರೆ ಮಾಡಿದ್ದೇವೆ. ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಬಂದವರಿಗೆ ಎನೂ ಸಮಸ್ಯೆ ಆಗದಂತೆ ಒಳ್ಳೆಯ ಆರೋಗ್ಯ ಉಪಚಾರ ಕೊಡಲು ಸಿದ್ಧತೆ ಆಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್
