ರಾಯಚೂರು, 29 ನವೆಂಬರ್ (ಹಿ.ಸ):
ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಡಿ.1ರಂದು ರಾಯಚೂರು ತಾಲ್ಲೂಕಿನ ಜಿಲ್ಲಾ ಕಾರಗೃಹದಲ್ಲಿ ಸಾಂಸ್ಕøತಿಕ ಸೌರಭ 2023ರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ.ವೆಂ ನಾಯಕ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಅವರು ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಜಿಲ್ಲಾ ಕಾರಾಗೃಹದ ಸೂಪರಿಟೆಂಡೆಂಟ್ ಬಿ.ಆರ್ ಅಂದಾನಿ, ಉಪಸ್ಥಿತರಿರಲಿದ್ದಾರೆ.
ಅಂದು ನಾಡಗೀತೆ, ಕನ್ನಡ ಗೀತೆಗಳು, ಸುಗಮ ಸಂಗೀತ, ಹಿಂದೂಸ್ಥಾನಿ ವಾದ್ಯ ಸಂಗೀತ, ಜಾನಪದ ಗೀತೆಗಳು, ಪ್ರವಚನ, ಚಿಲಿಪಿಲಿ ಗೊಂಬೆ, ಸಮೂಹ ನೃತ್ಯ, ವೀರಗಾಸೆ, ಹಗಲು ವೇಷ ಹಾಗೂ ಬಯಲಾಟ ಸೇರಿದಂತೆ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದವರು ತಿಳಿಸಿದ್ದಾರೆ.
