ಮುಂಬೈ, 28ನವೆಂಬರ್ (ಹಿ.ಸ):
ಆ್ಯಂಕರ್ :
ನಟಿ ರಶ್ಮಿಕಾ ಮಂದಣ್ಣ ತಮ್ಮ ಡೀಪ್ಫೇಕ್ ವಿಡಿಯೋ ಬಗ್ಗೆ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾ ಅನಿಮಲï ಈ ವಾರ ತೆರೆಗೆ ಬರುತ್ತಿದೆ. ಸಿನಿಮಾ ಪ್ರಚಾರಕ್ಕಾಗಿ ತಂಡದ ಜತೆ ಹೈದರಾಬಾದ್ಗೆ ಹೋಗಿದ್ದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ. ನಿಮ್ಮ ಡೀಪ್ಫೇಕ್ ವಿಡಿಯೋ ಬಂದಾಗ ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಬೆಂಬಲಕ್ಕೆ ನಿಂತರು. ಆ ಬಗ್ಗೆ ಏನು ಹೇಳುತ್ತೀರಾ ಎನ್ನುವ ಪ್ರಶ್ನೆಗೆ, ಈ ಸಮಸ್ಯೆ ಎಲ್ಲರಿಗೂ ಇದೆ. ಮೊದಲಿಗೆ ಅಮಿತಾಬ್ ಬಚ್ಚನ್ ಸರ್ಸಪೋರ್ಟ್ ಮಾಡಿದರು. ನಂತರ ಎಲ್ಲರೂ ಬೆಂಬಲಿಸಿದರು. ಮೊದಲು ಆ ವಿಡಿಯೋ ನೋಡಿದಾಗ ನೋವಾಯಿತು. ಆದರೆ, ಇದು ಸರ್ವೇ ಸಾಧಾರಣ ಆಗಿಬಿಟ್ಟಿದೆ. ಮೊದ ಮೊದಲು ಭಯ ಆಯ್ತು.
ನಾವೇನುಮಾಡೋಕೆ ಸಾಧ್ಯ ಎಂದುಕೊಂಡೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡೆ. ಆದರೆ, ಎಲ್ಲರೂ ಮುಂದೆ ಬಂದು ಸಪೋರ್ಟ್ ಮಾಡಿದ್ದು ನೋಡಿ ಇದು ಸಾಮಾನ್ಯ ವಿಷಯ ಅಲ್ಲ, ನಾನು ಪ್ರತಿಕ್ರಿಯಿಸಬೇಕು ಎಂದು ಕೊಂಡೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹಾಗಾಗಿ ಎಲ್ಲಾ ಹುಡುಗಿಯರಿಗೆ ಹೇಳಲು ಬಯಸುತ್ತೇನೆ.
ಹಿಂದೂಸ್ತಾನ್ ಸಮಾಚಾರ್
