ಬೆಂಗಳೂರು,25ನವೆಂಬರ್ (ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ – ಹೆಚ್ಎಎಲ್ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು, ತೇಜಸ್ ಯುದ್ಧ ವಿಮಾನ ಸೇರಿದಂತೆ ಘಟಕದ ಉತ್ಪಾದನಾ ಸೌಕರ್ಯಕ್ಕೆ ಭೇಟಿ ನೀಡಿ, ಪರಿಶೀಲಿಸಲಿದ್ದಾರೆ. ೧೨ ಅತ್ಯಾಧುನಿಕ ಎಸ್ಯು – ೩೦ ಎಂಕೆಐ ಯುದ್ಧ ವಿಮಾನಗಳ ಖರೀದಿಗೆ ಭಾರತೀಯ ವಾಯುಪಡೆ ಇತ್ತೀಚೆಗೆ ಹೆಚ್ಎಎಲ್ಗೆ ಟೆಂಡರ್ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ಭೇಟಿಯನ್ನು ಕೈಗೊಳ್ಳಲಿದ್ದಾರೆ. ಭಾರತೀಯ ವಾಯುಪಡೆ, ಇತ್ತೀಚೆಗೆ ೧೨ ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿ ಟೆಂಡರ್ಅನ್ನು ಸರ್ಕಾರಿ ಒಡೆತನದ ಹೆಚ್ಎಎಲ್ಗೆ ನೀಡಿದೆ. ಡಿಆರ್ಡಿಒ ಮುಖ್ಯಸ್ಥ ಡಾ. ಸಮೀರ್ ವಿ. ಕಾಮತ್, ದೇಶದ ರಕ್ಷಣಾ ಉತ್ಪಾದನಾ ವಲಯವನ್ನು ಉತ್ತೇಜಿಸುವ ಕ್ರಮವಾಗಿ ಎಲ್ಸಿಎ ಮಾರ್ಕ್-೨ ಇಂಜಿನ್ಗಳು ಮತ್ತು ಅತ್ಯಾಧುನಿಕ ಮಧ್ಯಮ ಯುದ್ಧ ವಿಮಾನ – ಎಎಂಸಿಎಗಳನ್ನು ದೇಶೀಯವಾಗಿ ಉತ್ಪಾದಿಸಲಾಗಿದೆ ಎಂದು ಹೇಳಿದ್ದಾರೆ. ಹೆಚ್ಎಎಲ್ ಹಾಗೂ ಅಮೆರಿಕದ ಜಿಇ ಕಂಪನಿ, ಭಾರತದಲ್ಲಿನ ಸೌಕರ್ಯದಲ್ಲಿ ಈ ಇಂಜಿನ್ಗಳನ್ನು ಉತ್ಪಾದಿಸಲಿದೆ.
ಹಿಂದೂಸ್ತಾನ್ ಸಮಾಚಾರ್
