ಪಣಜಿ,21ನವೆಂಬರ್ (ಹಿ.ಸ):
ಆ್ಯಂಕರ್ :ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- IಈಈI ನಲ್ಲಿ ಇಂದು ಭಾರತೀಯ ಪನೋರಮಾ ಪ್ರಾರಂಭವಾಗಲಿದೆ. ಈ ವಿಭಾಗದಲ್ಲಿ ೨೫ ಚಲನಚಿತ್ರಗಳು, ೨೦ ನಾನ್-ಫೀಚರ್ ಫಿಲ್ಮ್ಗಳನ್ನು ಪ್ರದರ್ಶಿಸಲಾಗುತ್ತದೆ.
ಭಾರತೀಯ ಪನೋರಮಾದಲ್ಲಿ ಆನಂದ್ ಎಕರ್ಸಾಹಿ ನಿರ್ದೇಶನದ ಮಲಯಾಳಂ ಚಿತ್ರ ಆಟಂ ಪ್ರದರ್ಶನವಾಗಲಿದೆ. ಮೀನಾ ಲಾಂಗ್ಜಮ್ ನಿರ್ದೇಶನದ ’ಆಂಡ್ರೋ ಡ್ರೀಮ್ಸ್’ ಸಾಕ್ಷ್ಯಚಿತ್ರವು ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ಮೊದಲು ಪ್ರದರ್ಶನವಾಗಲಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುವ ಇತರ ಚಲನಚಿತ್ರಗಳೆಂದರೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ’ದಿ ವ್ಯಾಕ್ಸಿನ್ ವಾರ್’, ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡ ಚಲನಚಿತ್ರ ಕಾಂತಾರ ಮತ್ತು ಕೌಶಿಕ್ ಗಂಗೂಲಿ ನಿರ್ದೇಶನದ ಬಂಗಾಳಿ ಚಲನಚಿತ್ರ ಅರ್ಧಾಂಗಿನಿ. ಭಾರತೀಯ ಪನೋರಮಾ ಸಿನಿಮೀಯ, ವಿಷಯಾಧಾರಿತ ಮತ್ತು ಸೌಂದರ್ಯದ ಶ್ರೇಷ್ಠತೆಯಿಂದ ಗುರುತಿಸಲ್ಪಟ್ಟ ವರ್ಷದ ಅತ್ಯುತ್ತಮ ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲು ಮೀಸಲಾಗಿರುತ್ತದೆ. ಭಾರತೀಯ ಪನೋರಮಾ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಭಾಗವಹಿಸಲಿದ್ದಾರೆ. ’೭೫ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ’ ೩ ನೇ ಆವೃತ್ತಿಯ ಭಾಗವಾಗಿ ೪೮ ಗಂಟೆಗಳ ’ಫಿಲ್ಮ್ ಚಾಲೆಂಜ್’ಗೆ ಚಾಲನೆ ನೀಡಲಿದ್ದಾರೆ. ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ ಯುವ ಕಲಾವಿದರು ಭವಿಷ್ಯದಲ್ಲಿ ಪ್ರಮುಖ ಚಲನಚಿತ್ರ ನಿರ್ಮಾಪಕರು, ಕಲಾವಿದರಾಗಿ ಮಾರ್ಪಡಿಸಿಕೊಳ್ಳಲು ವೇದಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್
