ನವದೆಹಲಿ,20ನವೆಂಬರ್ (ಹಿ.ಸ):
ಆ್ಯಂಕರ್ :
ಭಾರತದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ ) ಇಂದು ಗೋವಾದಲ್ಲಿ ಆರಂಭವಾಗಲಿದೆ. ಬಾಂಬೋಲಿಮ್ನ ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು 270 ಚಲನಚಿತ್ರಗಳನ್ನು ಪ್ರದರ್ಶಿಸುವ 9 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಬ್ರಿಟಿಷ್ ಚಿತ್ರ ‘ಕ್ಯಾಚಿಂಗ್ ಡಸ್ಟ್’ ಆರಂಭಿಕ ಚಿತ್ರವಾಗಿದ್ದರೆ, ಯುಎಸ್ನ ‘ದಿ ಫೆದರ್ವೈಟ್’ ಈ ವರ್ಷದ ಉತ್ಸವದ ಮುಕ್ತಾಯದ ಚಿತ್ರವಾಗಿದೆ. ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಾಲಿವುಡ್ ನ ದಿಗ್ಗಜ ನಟ ಮತ್ತು ನಿರ್ಮಾಪಕ ಮೈಕೆಲ್ ಡಗ್ಲಾಸ್ ಅವರಿಗೆ ನೀಡಲಾಗುವುದು. ಓಟಿಟಿ ಸರಣಿಗಳು ಮತ್ತು ಚಲನಚಿತ್ರಗಳಲ್ಲಿನ ಶ್ರೇಷ್ಠತೆಯನ್ನು ಗುರುತಿಸಲು ಐ ಎಫ್ ಎಫ್ ಐ ಈ ವರ್ಷದಿಂದ ಓಟಿಟಿ ಪ್ರಶಸ್ತಿಗಳನ್ನು ಪ್ರಾರಂಭಿಸಿದೆ. ಠಾಕೂರ್ ಅವರು ಪ್ರತಿ ವರ್ಷ ಐ ಎಫ್ ಎಫ್ ಐ ಜೊತೆಗೆ ಆಯೋಜಿಸಲಾದ ಫಿಲ್ಮ್ ಬಜಾರ್ ಅನ್ನು ಸಹ ಉದ್ಘಾಟಿಸುತ್ತಾರೆ. ಪ್ರಸಾರಾಂಗದ ಮಾಹಿತಿ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಚಲನಚಿತ್ರ ತಾರೆಯರಾದ ಮಾಧುರಿ ದೀಕ್ಷಿತ್, ಶಾಹಿದ್ ಕಪೂರ್, ಶ್ರಿಯಾ ಶರಣ್, ನುಶ್ರತ್ ಭರುಚಾ, ಪಂಕಜ್ ತ್ರಿಪಾಠಿ, ಶಂತನು ಮೊಯಿತ್ರಾ, ಶ್ರೇಯಾ ಘೋಸಲ್ ಮತ್ತು ಸುಖ್ವಿಂದರ್ ಸಿಂಗ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
