
ನವದೆಹಲಿ,18ನವೆಂಬರ್ (ಹಿ.ಸ):
ಆ್ಯಂಕರ್ :
ಆಕಾಶವಾಣಿಯಲ್ಲಿ ಈ ತಿಂಗಳ ೨೬ರಂದು ಪ್ರಸಾರವಾಗಲಿರುವ ಮನ್-ಕಿ-ಬಾತ್ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ನಾಗರಿಕರಿಂದ ಅನಿಸಿಕೆಗಳನ್ನು ಆಹ್ವಾನಿಸಿದ್ದಾರೆ. ಈ ತಿಂಗಳ ಮನ್ -ಕಿ- ಬಾತ್ಗೆ ಹೆಚ್ಚಿನ ಸಂಖ್ಯೆಯ ಅನಿಸಿಕೆಗಳು ಬರುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಗೌ ಅಥವಾ ನಮೋ ಆಪ್ ನಲ್ಲಿ ಜನರು ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಪ್ರಧಾನಿಯವರು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಸ್ಫೂರ್ತಿದಾಯಕ ಜೀವನ ಪಯಣಗಳು ಈ ಕಾರ್ಯಕ್ರಮದ ಸಾರವಾಗಿದ್ದು, ಇದು ಪ್ರತಿ ಸಂಚಿಕೆಯನ್ನು ಹೆಚ್ಚು ಶ್ರೀಮಂತಗೊಳಿಸಿ ಒಳನೋಟವನ್ನು ನೀಡುತ್ತಿದೆ.
ಹಿಂದೂಸ್ತಾನ್ ಸಮಾಚಾರ್
