ಮಂಗಳೂರು,18ನವೆಂಬರ್ (ಹಿ.ಸ):
ಆ್ಯಂಕರ್ :ಕಳೆದ ಒಂದು ವಾರದಲ್ಲಿ ನಗರ ಪೊಲೀಸರು ( ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ) ಕಾಯ್ದೆಯಡಿ 42 ಪ್ರಕರಣಗಳನ್ನುದಾಖಲಿಸಿಕೊಂಡಿದ್ದಾರೆ. ನವೆಂಬರ್ 6 ರಿಂದ 12 ರವರೆಗೆ ಪೊಲೀಸರು 23,550 ಮೌಲ್ಯದ 1 ಕೆಜಿ ಗಾಂಜಾ ಮತ್ತು 2.7 ಲಕ್ಷ ಮೌಲ್ಯದ 54 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ. ಮಾದಕ ದ್ರವ್ಯ ಹೊಂದಿದ್ದಕ್ಕೆ ಸಂಬಂಧಿಸಿದಂತೆ ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 13 ಜನರನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ 35 ಪ್ರಕರಣಗಳು ದಾಖಲಾಗಿದ್ದು, 36 ಜನರನ್ನು ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್
