ಕೋಲಾರ,17 ನವೆಂಬರ್ (ಹಿ.ಸ):
ಆ್ಯಂಕರ್ : ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜರುಗಿದ ಬೆಂಗಳೂರು ವಿಭಾಗ ಮಟ್ಟದ ಬಾಲಕಿಯರ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಗನಲ್ಲಿ ತಿಪ್ಪೇಸ್ವಾಮಿ ಪ್ರೌಢಶಾಲೆಯ ತಂಡ ಪ್ರಥಮ ಬಹುಮಾನ ಗೆದ್ದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ನಡೆಸಿದ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳ ಪೈಕಿ ೧೭ ವರ್ಷ ವಯೋಮಿತಿಯೊಳಗಿನ ಅರಗನಲ್ಲಿ ತಂಡ ಅತ್ಯುತ್ತಮವಾಗಿ ಪ್ರದರ್ಶನ ನೀಡಿ ಮೊದಲ ಬಹುಮಾನ ಟ್ರೋಫಿ ಗೆದ್ದುಕೊಂಡಿದೆ.
ಇದೇ ತಂಡದ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಕುಮಾರಿ ಎಚ್ ಸಿಂಚನ ಪಡೆದುಕೊಂಡಿದ್ದಾರೆ.
ತAಡದಲ್ಲಿ ಎಚ್.ಸಿಂಚನ, ಸಾಧನ, ನಾಗಶ್ರೀö, ದೀಕ್ಷಿತ, ಸಪ್ನö, ಉಷಾ, ನಮಿತ, ಜ್ಞಾನ, ಶ್ರಾವ್ಯö, ಐಶ್ವರ್ಯ, ಆರ್.ದೀಕ್ಷಾ ಮತ್ತು ಎನ್.ಸಂಜನಾ ಭಾಗವಹಿಸಿದ್ದರು. ತಂಡದ ವ್ಯವಸ್ಥಾಪಕರಾಗಿ ಟಿ.ಗೀತಾ ಮತ್ತು ತರಬೇತುದಾರರಾಗಿ ಶಿವಮೊಬ್ಬ ದೈಹಿಕ ಶಿಕ್ಷಣ ಶಿಕ್ಷಕ ಡಿ.ರೇವಣಪ್ಪ ಕಾರ್ಯನಿರ್ವಹಿಸಿದ್ದರು.
ಚಿತ್ರ : ಕೋಲಾರ ನಗರದಲ್ಲಿ ಜರುಗಿದ ಬೆಂಗಳೂರು ವಿಭಾಗ ಮಟ್ಟದ ಬಾಲಕಿಯರ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರನಲ್ಲಿ ತಿಪ್ಪೇಸ್ವಾಮಿ ಪ್ರೌಢಶಾಲೆಯ ತಂಡ ಪ್ರಥಮ ಬಹುಮಾನ ಗೆದ್ದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
