
ದೆಹಲಿ , 16ನವೆಂಬರ್ (ಹಿ.ಸ):
ಆ್ಯಂಕರ್ :
ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಂದ ಪ್ರಚಾರ ಬಿರುಸುಗೊಂಡಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ ಸಂಜೆ ಮುಕ್ತಾಯಗೊಂಡಿದೆ. ತಾರಾ ಪ್ರಚಾರಕರಿಂದ ಸಭೆಗಳು, ರ್ಯಾಲಿಗಳು ನಡೆದವು.
ತೆಲಂಗಾಣದ ೧೧೯ ವಿಧಾನಸಭಾ ಕ್ಷೇತ್ರಗಳಿಗೆ ಇದೇ ತಿಂಗಳ ೩೦ ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ ತಾರಕ್ಕೇರಿದೆ.
ಈ ತಿಂಗಳ ೧೭ ರಂದು ಛತ್ತೀಸ್ ಗಢದ ಉಳಿದ ೭೦ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ, ರಾಜಸ್ಥಾನದ ಎಲ್ಲಾ ೨೦೦ ವಿಧಾನಸಭಾ ಕ್ಷೇತ್ರಗಳಿಗೆ ಈ ತಿಂಗಳ ೨೫ ರಂದು ಮತದಾನ ನಡೆಯಲಿದೆ. ಮಿಜೋರಾಂ, ಛತ್ತೀಸ್ ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ಮತ ಎಣಿಕೆ ಮುಂದಿನ ತಿಂಗಳು ೩ ರಂದು ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
