ಹುಬ್ಬಳ್ಳಿ , 14ನವೆಂಬರ್ (ಹಿ.ಸ):
ಆ್ಯಂಕರ್ :
ಬಿಎಸ್ ಯಡಿಯೂರಪ್ಪ ಪುತ್ರ, ಶಾಸಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವುದು ಯಾರಿಗೂ ಅಸಮಾಧಾನವಿಲ್ಲ. ಭಿನ್ನಾಭಿಪ್ರಾಯ ಇದ್ದರೆ ಎಲ್ಲರೂ ಮಾತನಾಡಿ ಸರಿ ಮಾಡುತ್ತೇವೆ. ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಮತ್ತು ನಾವು ಎಲ್ಲರೂ ಸೇರಿ ಸರಿ ಮಾಡುತ್ತೇವೆ. ನನಗೆ ವಿಶ್ವಾಸ ಇದೆ ಬಿವೈ ವಿಜಯೇಂದ್ರ ಎಲ್ಲರನ್ನೂ ಭೇಟಿಯಾಗುತ್ತಾರೆ. ಪಕ್ಷದ ಮೇಲೆ ಜನರಿಗೆ ನೀರಿಕ್ಷೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬೆಳಗುತ್ತಿದೆ. ಭಾರತದ ಸಂಸ್ಕೃತಿ ಕೂಡಾ ಎಲ್ಲ ಕಡೆ ಪಸರಿಸುತ್ತಿದೆ. ಇವತ್ತು ಜನ ಭಾರತದ ಸಂಸ್ಕ್ರತಿ ಸ್ವೀಕಾರ ಮಾಡಿದ್ದಾರೆ. ಅಮೇರಿಕಾದ ವೈಟ್ ಹೌಸ್ನಿಂದ ಇಂಗ್ಲೆಂಡ್ವರೆಗೂ ಅಧಿಕೃತ ಕಾರ್ಯಕ್ರಮ ಮಾಡುವ ಮಟ್ಟಿಗೆ ಸಂಸ್ಕೃತಿ ಬೆಳದಿದೆ. ದೇಶದಲ್ಲಿ ರಾಮಮಂದಿರದ ನಿರ್ಮಾಣದ ಕಾರ್ಯ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅಭಿವೃದ್ಧಿ ಜೊತೆಗೆ ಪುನರುತ್ಥಾನದ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ರಾಮಮಂದಿರ ಉದ್ಘಾಟನೆಯಾಗಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್
