ನವದೆಹಲಿ,13ನವೆಂಬರ್ (ಹಿ.ಸ):
ಆ್ಯಂಕರ್ :
ದೆಹಲಿಯಲ್ಲಿ ಇಂದಿನಿಂದ ೧೬ರವರೆಗೆ ನಡೆಯಲಿರುವ ಏಷ್ಯಾ ಮತ್ತು ಪೆಸಿಫಿಕ್ ಡಬ್ಲ್ಯುಒಎಎಚ್ ಪ್ರಾದೇಶಿಕ ಆಯೋಗದ ೩೩ನೇ ಸಮಾವೇಶದ ಆತಿಥ್ಯವನ್ನು ಭಾರತ ವಹಿಸಿದೆ. ಈ ಸಮಾವೇಶದ ಉದ್ಘಾಟನೆ ಮತ್ತು ಸಮಾರೋಪವನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಷೋತ್ತಮ್ ರೂಪಾಲಾ ನೆರವೇರಿಸಲಿದ್ದಾರೆ. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಡಾ||ಸಂಜೀವ್ ಬಲ್ಯಾನ್ ಮತ್ತು ಡಾ||ಎಲ್.ಮುರುಗನ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಭಾರತ ಸೇರಿದಂತೆ ೩೬ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಮಾನವ-ಪ್ರಾಣಿ-ಪರಿಸರದ ಮೇಲೆ ಕೋವಿಡ್ ಸಾಂಕ್ರಾಮಿಕ ತಂದೊಡ್ಡಿರುವ ಸವಾಲುಗಳಲ್ಲಿ ವೈಜ್ಞಾನಿಕತೆಯ ಮಹತ್ವದ ಪಾತ್ರ ಕುರಿತು ಚರ್ಚಿಸಲಿದ್ದಾರೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಪಶುಸಂಗೋಪನಾ ಸೇವೆಗಳ ಸಾಮರ್ಥ್ಯ ಹೆಚ್ಚಳದ ಅಗತ್ಯದ ಬಗ್ಗೆ ಈ ಸಮಾವೇಶ ಬೆಳಕು ಚೆಲ್ಲುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್
