
ರೇವಾರಿ,12ನವೆಂಬರ್ (ಹಿ.ಸ):
ಆ್ಯಂಕರ್ :
ಹರ್ಯಾಣದ ರೇವಾರಿ ಜಿಲ್ಲೆಯ ರಾಲಿಯಾವಾಸ್ ಗ್ರಾಮದ ಬಳಿ ನ್ಯಾಪ್ಕಿನ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಮಧ್ಯರಾತ್ರಿ 12ಗಂಟೆಗೆ ನಮಗೆ ಕರೆ ಬಂದಿತ್ತು, ತಕ್ಷಣ ನಾನಾ ಕಡೆಗಳಿಂದ ಅಗ್ನಿಶಾಮಕ ದಳದ ವಾಹನಗಳನ್ನು ಕರೆಸಿದ್ದೇವೆ, ಬೆಂಕಿ ನಂದಿಸುವ ಯತ್ನ ಮುಂದುವರೆದಿದೆ ಎಂದು ಕಸೋಲಾ ಪೊಲೀಸ್ ಠಾಣೆಯ ಎಎಸ್ಐ ಧರಂವೀರ್ ಯಾದವ್ ತಿಳಿಸಿದ್ದಾರೆ.
ಮತ್ತೊಂದು ಘಟನೆ ಮುಂಬೈ: ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ, 16 ಕಾರುಗಳು ಬೆಂಕಿಗಾಹುತಿ ಮುಂಬೈನ ದಾದರ್ ಪ್ರದೇಶದ ಹರಿಶ್ಚಂದ್ರ ಯವಾಲೆ ಮಾರ್ಗದಲ್ಲಿರುವ ಕೊಹಿನೂರ್ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 16 ಕಾರುಗಳು ಬೆಂಕಿಗಾಹುತಿಯಾಗಿದೆ. ರಾತ್ರಿ 1-2 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಣ ಇನ್ನೂ ತಿಳಿದುಬಂದಿಲ್ಲ. ಸಧ್ಯಕ್ಕೆ ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ.
ಹಿಂದೂಸ್ತಾನ್ ಸಮಾಚಾರ್
