
ಬೆಂಗಳೂರು , 6ನವೆಂಬರ್ (ಹಿ.ಸ):
ಆ್ಯಂಕರ್ :ಈ ಬಾರಿ ಹಿಂಗಾರು-ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಒಂದರ ಮೇಲೊಂದರಂತೆ ತರಕಾರಿ ಬೆಳೆಗಳು ಏರಿಕೆ ಆಗುತ್ತಿವೆ. ಕಳೆದ ಕೆಲವು ತಿಂಗಳ ಹಿಂದೆ ₹150ರ ಗಡಿದಾಡಿದ್ದ ಟೋಮೆಟೋ ಇದೀಗ ತಹಬದಿಗೆ ಬಂದಿದೆ. ಈ ಭಾರದಿಂದ ತಪ್ಪಿಸಿಕೊಂಡಿವು ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಂತೆ ಇದೀಗ ಈರುಳ್ಳಿ ಏರಿಕೆಯಾಗಿ ಜನರ ಕಣ್ಣಲ್ಲಿ ನೀರು ತರಿಸುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಈರುಳ್ಳಿಗೆ ಸಮರ್ಪಕ ಬೆಲೆ ಸಿಗದ ಕಾರಣ ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಬಿತ್ತನೆ ಕ್ಷೇತ್ರ ಗಣನೀಯವಾಗಿ ಇಳಿಕೆ ಕಂಡಿತ್ತು. ಭೀಕರ ಬರದಿಂದ ಈಗ ಆ ಈರುಳ್ಳಿ ಕೂಡ ಹಾಳಾಗಿದ್ದು, ಅಲ್ಪಸಲ್ಪ ಒಣ ಬೇಸಾಯ ಮತ್ತು ನೀರಾವರಿ ಆಶ್ರಿತ ಈರುಳ್ಳಿ ಉಳಿದಿದೆ. ಸದ್ಯ ಮಾರುಕಟ್ಟೆಯಲ್ಲಿ ನಿತ್ಯ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಕ್ವಿಂಟಲ್ಗೆ ₹೩.೫ ಸಾವಿರದಿಂದ ₹೫ ಸಾವಿರ ತನಕ ಬಂಪರ್ ಬೆಲೆ ಸಿಗುತ್ತಿದೆ. ಆದರೆ, ಇದರ ಲಾಭ ಪಡೆಯಬೇಕಾದ ರೈತರ ಜಮೀನುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನು ಇಲ್ಲವಾಗಿದೆ. ಬೆಳೆ ಬಂದಾಗ ಬೆಲೆ ಇಲ್ಲ. ಬೆಲೆ ಇದ್ದಾಗ ಬೆಳೆ ಇಲ್ಲ ಎನ್ನುವ ಪರಿಸ್ಥಿತಿ ಈರುಳ್ಳಿ ಬೆಳೆಗಾರರು ಎದುರಿಸುವಂತಾಗಿದೆ. ಆದರೆ, ಹರಸಾಹಸದಿಂದ ಉಳಿಸಿಕೊಂಡ ಅಳಿದುಳಿದ ಬೆಳೆಗೆ ಬಂಪರ್ ಬೆಲೆ ಬರುವ ನಿರೀಕ್ಷೆ ರೈತರಲ್ಲಿದೆ.
ಹಿಂದೂಸ್ತಾನ್ ಸಮಾಚಾರ್
