ನವದೆಹಲಿ, 5 ನವೆಂಬರ್ (ಹಿ.ಸ):
ಆ್ಯಂಕರ್ :ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸತತ ಐದನೇ ದಿನವೂ ವಾಯುಮಾಲಿನ್ಯ ಅಪಾಯಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಜನರ ಆರೋಗ್ಯ ಹದಗೆಡುವ ಆತಂಕ ಮತ್ತಷ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಾನದಂಡಗಳ ಪ್ರಕಾರ, ದೆಹಲಿಯ ಗಾಳಿ ಈಗ 80ರಿಂದ 100 ಪಟ್ಟು ಮಲಿನವಾಗಿದೆ. ಕೇಂದ್ರ ಸರ್ಕಾರದ ಸುರಕ್ಷತಾ ಮಿತಿಯನ್ನೇ ಆಧರಿಸಿ ಹೇಳುವುದಾದರೆ ದೆಹಲಿಯಲ್ಲಿ ಗಾಳಿ 7ರಿಂದ 8 ಪಟ್ಟು ಮಲಿನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಶುಕ್ರವಾರ ಕೊಂಚ ಗಾಳಿ ಬೀಸಿದ್ದರಿಂದ ದೆಹಲಿಯ ವಿವಿಧ ಭಾಗಗಳಲ್ಲಿ ಕಲುಷಿತ ಗಾಳಿಯ ಪ್ರಮಾಣ ಕೊಂಚ ಪ್ರಮಾಣದಲ್ಲಿ ತಗ್ಗಿದೆ. ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಮಕ್ಕಳು ಹಾಗೂ ವೃದ್ಧರಲ್ಲಿ ಉಸಿರಾಟ ಮತ್ತು ಕಣ್ಣಿನ ತೊಂದರೆ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
