
ನವದೆಹಲಿ, 5 ನವೆಂಬರ್ (ಹಿ.ಸ):
ಆ್ಯಂಕರ್ :ಛತ್ತೀಸ್ ಗಢ ಮತ್ತು ಮೀಜೋರಾಂ ವಿಧಾನಸಭಾ ಚುನಾವಣೆ ಸನಿಹಗೊಂಡ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಿವೆ. ಛತ್ತೀಸ್ ಗಢದಲ್ಲಿ ಮೊದಲ ಹಂತದಲ್ಲಿ ೨೦ ಸ್ಥಾನಗಳಿಗೆ ಮತ್ತು ಮಿಜೋರಾಂ ನಲ್ಲಿ ಎಲ್ಲಾ ೪೦ ವಿಧಾನಸಭಾ ಕ್ಷೇತ್ರಗಳಿಗೆ ಇದೇ ೭ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ ೩ರಂದು ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
