ಬೆಂಗಳೂರು, 5 ನವೆಂಬರ್ (ಹಿ.ಸ):
ಆ್ಯಂಕರ್ :
ವಿಕ್ರಮ್ ಸಿನಿಮಾ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದ ಕಮಲ್ ಹಾಸನ್ ತಾನು ಮೊಟ್ಟ ಮೊದಲಿಗೆ ತಮಿಳು ಸಿನಿಮಾವೊಂದಕ್ಕೆ ಕೊಳ್ಳೇಗಾಲದಲ್ಲಿ ಶೂಟಿಂಗ್ ಮಾಡಿದ ಅನುಭವವನ್ನೂ ಬಿಚ್ಚಿಟ್ಟದ್ದರು. 1977ರಲ್ಲಿ ಕೋಕಿಲ ಸಿನಿಮಾದಲ್ಲಿ ನಟಿಸಿದ್ದನ್ನೂ ನೆನಪಿಸಿಕೊಂಡಿದ್ದರು. ಆಗಿನಿಂದಲೂ ಕಮಲ್ಗೆ ಕರ್ನಾಟಕದೊಂದಿಗೆ ನಂಟು ಹಾಗೆಯೇ ಇದೆ. ಕಮಲ್ ಹಾಸನ್ ಈಗಲೂ ಪುಟ್ಟಣ್ಣ ಕಣಗಾಲ್ ಅವರನ್ನು ಮರೆತಿಲ್ಲ. ಬೆಂಗಳೂರಿಗೆ ಬಂದಾಗ ಕಮಲ್ ಹಾಸನ್, ಪುಟ್ಟಣ್ಣ ಕಣಗಾಲ್ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ನಿರ್ದೇಶಕ ಹಾಗೂ ನಾನು ಕಾರು ಮಾಡಿಕೊಂಡು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದೇವೆ. ಅದ್ಭುತ ನಿರ್ದೇಶಕ ಎಂದು ನೆನಪು ಮಾಡಿಕೊಂಡಿದ್ದರು. ಗಿರೀಶ್ ಕಾರ್ನಾಡ್ ಬರವಣಿಗೆ ಮೆಚ್ಚಿದ್ದರು ರಂಗಕರ್ಮಿ ಬಿವಿ ಕಾರಂತರನ್ನು ನೆನಪಿಸಿಕೊಂಡಿದ್ದರು. ಪುಷ್ಪಕ ವಿಮಾನ ಸಿನಿಮಾ ಮರೆಯುವುದುಂಟೆ. ಪ್ರತಿ ಸಿನಿಮಾ ಪ್ರೇಮಿ ಮೆಚ್ಚಿಕೊಂಡಿದ್ದ ಈ ಕ್ಲಾಸ್ ಮೂಕ ಚಿತ್ರವನ್ನು ಚಿತ್ರೀಕರಿಸಿದ್ದೆ ಬೆಂಗಳೂರಿನ ವಿಡ್ಸರ್ ಮ್ಯಾನರ್ ನಲ್ಲಿ. ಇನ್ನು ಕಮಲ್ ಬೆಂಗಳೂರಿಗೆ ಬಂದರೆ ಪರಾಗ್ ಹೋಟೆಲ್ನಲ್ಲಿ ಉಳಿಯುತ್ತಿದ್ದರಂತೆ. ಕಮಲ್ ಹಳೆ ಬೆಂಗಳೂರನ್ನೂ ನೋಡಿದ್ದಾರೆ. ಹೊಸ ಬೆಂಗಳೂರನ್ನೂ ನೋಡಿದ್ದಾರೆ. ಶೂಟಿಂಗ್ ವೇಳೆ ಜಾಗಿಂಗ್ ಮಾಡುತ್ತಿದ್ದ ದಾರಿಗಳೂ ಇವತ್ತಿಗೆ ನೆನಪಿವೆ ಎನ್ನುತ್ತಾರೆ. ಅಲ್ಲದೆ ಡಾ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಬಗ್ಗೆಯೂ ಹಲವಾರು ನೆನಪುಗಳನ್ನು ಕಮಲ್ ಹಾಸನ್ ಹಂಚಿಕೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್
