ನವದೆಹಲಿ, 4 ನವೆಂಬರ್ (ಹಿ.ಸ):
ಆ್ಯಂಕರ್ :ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಮೊದಲ ಪಂದ್ಯದಲ್ಲಿ ಟಾಮ್ ಲಾಥಮ್ ನಾಯಕತ್ವದ ನ್ಯೂಝಿಲೆಂಡ್ ಮತ್ತು ಬಾಬರ್ ಅಝಂ ನೇತೃತ್ವದ ಪಾಕಿಸ್ತಾನ ಮುಖಾಮುಖಿ ಆಗಲಿದೆ. ಮಧ್ಯಾಹ್ನ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಇಂಗ್ಲೆಂಡ್ ಹಾಗೂ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಸೆಣೆಸಾಟ ನಡೆಸಲಿದೆ. ಇಂದು ನಡೆಯಲಿರುವ ಎರಡೂ ಮ್ಯಾಚ್ ಹೈವೋಲ್ಟೇಜ್ ಪಂದ್ಯ ಆಗುವ ನಿರೀಕ್ಷೆ ಇದೆ.
ಕಿವೀಸ್-ಪಾಕ್
ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಫಲಿತಾಂಶ ಕೇವಲ ಈ ಎರಡು ತಂಡಕ್ಕೆ ಮಾತ್ರವಲ್ಲದೆ ಇತರೆ ಟೀಮ್ಗಳ ಮೇಲೂ ಪರಿಣಾಮ ಬೀರಲಿದೆ. ಇಂದು ನ್ಯೂಝಿಲೆಂಡ್ ಗೆದ್ದರೆ ಪಾಕಿಸ್ತಾನ, ಶ್ರೀಲಂಕಾ, ನೆದರ್ಲೆಂಡ್ಸ್ ಮತ್ತು ಇಂಗ್ಲೆಂಡ್ ತಂಡ ವಿಶ್ವಕಪ್ನಿಂದ ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ಬಾಬರ್ ಪಡೆ ಗೆಲ್ಲಲಿ ಎಂದು ಇತರೆ ತಂಡಗಳು ಕೂಡ ಹರಸುತ್ತಿದೆ. ಗೆಲುವಿನ ಲಯಕ್ಕೆ ಮರಳಿರುವ ಪಾಕ್ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡುತ್ತೆ ನೋಡಬೇಕು. ಮತ್ತೊಂದೆಡೆ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಕಿವೀಸ್ಗೆ ಕೂಡ ಗೆಲುವು ಅಗತ್ಯ.
ಹಿಂದೂಸ್ತಾನ್ ಸಮಾಚಾರ್
