ಕೋಲಾರ, ೨ ನವೆಂಬರ್ (ಹಿ.ಸ) :
ಆ್ಯಂಕರ್ : ಬೆಂಗಳೂರು ಪ್ರದೇಶ, ಕೋಲಾರ ವಲಯ, ಕೆಜಿಎಫ್ ಶಾಖೆಯ ಕ್ಯಾಸಂಬಳ್ಳಿ ಗ್ರಾಮದಲ್ಲಿ ಸಿಎಜಿಎಲ್ ವತಿಯಿಂದ ಗುರುವಾರ ಅಂಗನವಾಡಿ ಕೇಂದ್ರಕ್ಕೆ ೨೦ ಬೇಬಿ ಚೇರ್, ೪ ವಿಸಿಟರ್ ಚೇರ್ ಮತ್ತು ೨ ಕಾರ್ಪೆಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಅಮೃತಾ, ಶಿಕ್ಷಕಿ ಮಂಜುಳಾದೇವಿ, ಜಿ.ಪಂ.ಅಧ್ಯಕ್ಷ ನಾಗೇಂದ್ರ ಬಾಬು, ಸಿಎಜಿಎಲ್ ವಲಯ ವ್ಯವಸ್ಥಾಪಕ ಪ್ರಕಾಶ್, ಬಿಎಂ ಹನುಮಂತಯ್ಯ, ಸದಸ್ಯರಾದ ರಿಹಾನಾ, ಹಸೀನಾ, ಪುಷ್ಪಾ, ದೀಪಾ, ಸರೋಜಮ್ಮ, ರಾಧಿಕಾ, ಶೋಭಮ್ಮ, ಸಿಎಜಿಎಲ್ ಶಾಖೆ ತಂಡದ ಸದಸ್ಯರು, ಸಾರ್ವಜನಿಕರು ಮತ್ತು ಮಕ್ಕಳು ಹಾಜರಿದ್ದರು.
ಚಿತ್ರ ; ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಸಿ.ಎ.ಜಿ.ಎಲ್ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಪರಿಕರಗಳನ್ನು ವಿತರಿಸಲಾಯಿತು.
