ಕೋಲಾರ, ೨ ನವೆಂಬರ್ (ಹಿ.ಸ) :
ಆ್ಯಂಕರ್ : ಅಕ್ಷರ ದಾಸೋಹ ಅಡಿಗೆ ಮನೆಯಲ್ಲಿ ಸುರಕ್ಷತಾ ಕ್ರಮಗಳು ಇಲ್ಲದೆ ಆಗಾಗ ಸ್ಟವ್ ಸಿಡಿದು ಅಡುಗೆಯವರು ಗಾಯಗೊಳ್ಳುವ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ಕೋಲಾರ ನಗರದಲ್ಲಿ ಸ್ಟವ್ ಸಿಡಿದು ಅಡುಗೆ ಸಹಾಯಕರು ತೀವ್ರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ನಂತರ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಬದಲಾಗಿ ಗಾಢ ನಿದ್ರೆಗೆ ಜಾರಿದೆ. ಸುರಕ್ಷತಾ ಕ್ರಮಗಳು ಇಲ್ಲದ ಕಾರಣ ಮತ್ತೆ ಸ್ಟವ್ ಸಿಡಿದು ಅಡುಗೆ ಸಹಾಯಕಿ ಗಾಯಗೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಸರ್ಕಾರಿ ಶಾಲೆಯಲ್ಲಿ ಗ್ಯಾಸ್ ಸ್ಟವ್ ಸಿಡಿದು ಅಡುಗೆ ಸಹಾಯಕಿ ಶಾಂತಮ್ಮ ತೀರ್ವ ಗಾಯಗೊಂಡು ಕೋಲಾರ ನಗರದ ವಂಶೋದಯ ಆಸ್ಪತ್ರೆಯಲ್ಲಿ ದಾಖಲಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಲೂರು ತಾಲೂಕು ಮಾಸ್ತಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಾಂತಮ್ಮ ರವರು ಎಂದಿನAತೆ ಮಂಗಳವಾರ ಬೆಳಗ್ಗೆ ವಿದ್ಯಾರ್ಥಿಗಳಿಗೆ ಹಾಲು ಕಾಯಿಸಲು ಗ್ಯಾಸ್ ಸ್ಟವ್ ಬಳಿ ಬಂದು ಗ್ಯಾಸ್ ಹಚ್ಚಲು ಹೋದಾಗ ಗ್ಯಾಸ್ ಸ್ಟವ್ ಸಿಡಿದು ಮುಖ ಕೈ ಕಾಲು ದೇಹ ಸುಟ್ಟುಹೋಗಿದೆ.
ಮಾಲೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ನಗರದ ವಂಶೋದಯ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ವಂಶೋದಯ ಆಸ್ಪತ್ರೆ ವೈದ್ಯರು ತಕ್ಷಣ ಚಿಕಿತ್ಸೆಯನ್ನು ಮಾಡಿದ್ದಾರೆ. ಕೈ ಕಾಲು ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಆಸ್ಪತ್ರೆಗೆ ಭೇಟಿ ಕೊಟ್ಟ ಪ್ರಜಾ ಸೇವಾ ಸಮಿತಿ ಸಂಯೋಜಿತ ಅಕ್ಷರ ದಾಸೋಹ ಕ್ಷೇಮಾಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ ನÀವರ ಮಾರ್ಗದರ್ಶನದಲ್ಲಿ ಬಿಸಿ ಊಟ ನೌಕರರ ಅಧ್ಯಕ್ಷರಾದ ಕೋಲಾರ ಮಮತಾ ರಾಧಮ್ಮ ಮತ್ತು ರೈತನಾಯಕ ಪ್ರೊಫೆಸರ್ ನಂಜುAಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷರಾದ ಕಲ್ವಮಂಜಲಿ ರಾಮುಶಿವಣ್ಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ನಾರಾಯಣಸ್ವಾಮಿ ತಂಡ ಆಸ್ಪತ್ರೆಗೆ ಭೇಟಿ ನೀಡಿ ಶಾಂತಮ್ಮರವರ ಆರೋಗ್ಯವನ್ನು ವಿಚಾರಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದರು.
ಕಲ್ವಮಂಜಲಿ ರಾಮುಶಿವಣ್ಣ ಘಟನೆಯ ಬಗ್ಗೆ ಮಾತನಾಡಿ ಶಾಲೆಗಳಲ್ಲಿ ೫ ರಿಂದ ೨೦ ವರ್ಷವಾದರೂ ಗ್ಯಾಸ್ ಸ್ಟವ್ ಮತ್ತು ಕುಕ್ಕರ್ ಬದಲಾಯಿಸಿ ಹೊಸದಾಗಿ ಖರೀದಿ ಮಾಡಬೇಕಾಗಿದ್ದರೂ ಖರೀದಿ ಮಾಡಿದೆ ಅದನ್ನು ರಿಪೇರಿ ಮಾಡಿಸಿ ಅಡುಗೆ ಸಿಬ್ಬಂದಿ ಕೈಯಿಂದ ಕೆಲಸ ಮಾಡಿಸುತ್ತಿರುವುದು ಹಲವಾರು ಶಾಲೆಗಳಲ್ಲಿ ನಡೆಯುತ್ತಿದೆ. ಸರ್ಕಾರ ಹೊಸ ಗ್ಯಾಸ್ ಸ್ಟವ್ ಖರೀದಿ ಮಾಡಲು ಮತ್ತು ಹೊಸ ಕುಕ್ಕರ್ ಪಾತ್ರೆಗಳನ್ನು ಖರೀದಿ ಮಾಡಲು ಸರ್ಕಾರ ಕೂಡಲೇ ಎಲ್ಲಾ ಶಾಲೆಗಳಿಗೆ ಹಣ ಬಿಡುಗಡೆ ಮಾಡಬೇಕು ಹಾಗೂ ಸರ್ಕಾರ ಕೂಡಲೇ ಶಾಂತಮ್ಮರವರಿಗೆ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಬರಿಸಬೇಕೆಂದು ಮನವಿ ಮಾಡಿದರು.
ಈ ಹಿಂದೆ ಕೋಲಾರ ನಗರದ ಸರ್ಕಾರಿ ಶಾಲೆಯಲ್ಲಿ ಕುಕ್ಕರ್ ಸಿಡಿದು ಅಡುಗೆ ಅಡಿಗೆ ಸಹಾಯಕಿ ಸುಟ್ಟು ಕೈ ಕಾಲು ದೇಹ ಸುಟ್ಟು ಹೋಗಿದ್ದನ್ನು ನೆನಪಿಸಿಕೊಳ್ಳಬಹುದು ಈ ರೀತಿ ರಾಜ್ಯದಲ್ಲಿ ಸುಮಾರು ಶಾಲೆಗಳಲ್ಲಿ ಗ್ಯಾಸ್ ಸ್ಟವ್ ಸಿಡಿದು ಕುಕ್ಕರ್ ಸಿಡಿದು ಅಡುಗೆ ಸಿಬ್ಬಂದಿ ಸಂಪೂರ್ಣವಾಗಿ ಸುಟ್ಟು ಹೋಗುತ್ತಿದ್ದ ಕೆಲವು ಕಡೆ ಅಂಗವಿಕಲರಾಗಿ ಜೀವನ ಪರ್ಯಂತ ಜೀವಿಸಬೇಕಾದಂತ ಪರಿಸ್ಥಿತಿ ಉದ್ಭವವಾಗುತ್ತಿದೆ. ೨೦೦೩ ರಿಂದ ಇದುವರೆಗೂ ಸರ್ಕಾರದ ಯೋಜನೆಯದ ಅಕ್ಷರ ದಾಸೋಹ ಕಾರ್ಯಕ್ರಮ ಕ್ಷೀರಭಾಗ್ಯ ಕಾರ್ಯಕ್ರಮ ಮಟ್ಟೆ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದ್ದಾರೆ. ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟ0ತ ಸರ್ಕಾರ ಬಿಸಿಊಟ ನೌಕರರ ಪರವಾಗಿ ನಿಲ್ಲಬೇಕಾಗಿತ್ತು ಎಂದರು.
ಈಗಲಾದರೂ ಸರ್ಕಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೀತಿ ಸುಟ್ಟು ಹೋದ ಘಟನೆಗಳಾದಾಗ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಬರಿಸಬೇಕು. ಅಂಗವಿಕಲರಾಗಲಿ ಅವರ ಕುಟುಂಬಕ್ಕೆ ಸರ್ಕಾರಿ ಕೆಲಸವನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.
ಅಕ್ಷರ ದಾಸೋಹ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಮಾಲೂರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ್ ಮೂರ್ತಿ, ಕೋಲಾರ ಅಕ್ಷರ ಸಹಾಯಕ ನಿರ್ದೇಶಕ ಸುಬ್ರಮಣಿ ಆಸ್ಪತ್ರೆಗೆ ಭೇಟಿ ನೀಡಿ ಶಾಂತಮ್ಮರವರ ಆರೋಗ್ಯವನ್ನು ವಿಚಾರಿಸಿ ಧೈರ್ಯ ತುಂಬಿದರು.
ಚಿತ್ರ : ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಸರ್ಕಾರಿ ಶಾಲೆಯಲ್ಲಿ ಕುಕ್ಕರ್ ಸಿಡಿದು ತೀವ್ರವಾಗಿ ಗಾಯಗೊಂಡಿರುವ ಅಡುಗೆ ಸಹಾಯಕರಾದ ಶಾಂತಮ್ಮ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
